fbpx
ಸಮಾಚಾರ

ಅಕ್ಟೋಬರ್ 22: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಮಂಗಳವಾರ, ಅಕ್ಟೋಬರ್ 22 2019
ಸೂರ್ಯೋದಯ : 6:10 am
ಸೂರ್ಯಾಸ್ತ: 5:57 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಆಶ್ವೇಜ
ಪಕ್ಷ : ಕೃಷ್ಣಪಕ್ಷ
ತಿಥಿ : ಸಪ್ತಮೀ 06:44
ನಕ್ಷತ್ರ:ಪುನರ್ವಸು 17:33
ಯೋಗ: ಸಿಧ್ಧ 22:28
ಕರಣ: ಬಾವ 06:44 ಬಾಲವ 18:09

ಅಭಿಜಿತ್ ಮುಹುರ್ತ: 11:40 am – 12:27 pm
ಅಮೃತಕಾಲ : 7:48 am – 9:25 am

ರಾಹುಕಾಲ-7:41 am – 9:09 am
ಯಮಗಂಡ ಕಾಲ- 10:36 am – 12:04 pm
ಗುಳಿಕ ಕಾಲ- 1:31 pm – 2:59 pm

 

 

 

 

ಪದೇ ಪದೆ ವಿರೋಧಿಗಳಿಂದ ಒದಗಿ ಬರುತ್ತಿರುವ ಕಿರಿಕಿರಿಗಳು ಗೆಳೆಯನ ಬೆಂಬಲದಿಂದ ಪರಿಹಾರಗೊಳ್ಳುವುದು. ಈ ಸಂಕಷ್ಟಗಳಿಗೆ ಮನೆಯ ವಾಸ್ತುವೇ ಕಾರಣ ಎಂದು ಮನೆ ಬದಲಾಯಿಸಲು ಮನಸು ಮಾಡುವುದು ಸೂಕ್ತವಲ್ಲ.

ಗೆಳೆಯರು ಬೆಂಬಲದ ಭರವಸೆ ಕೊಟ್ಟು ಹಿಂಜರಿಯುತ್ತಾರೆ. ಈ ಬಗ್ಗೆ ನಿರಾಶರಾಗದಿರಿ. ಸರ್ವ ವಿಘ್ನ ಪರಿಹಾರಕನಾದ ಗಣೇಶನನ್ನು ಪ್ರಾರ್ಥಿಸಿರಿ. ಸಂಜೆ ದೀನದಲಿತರಿಗೆ ಆಹಾರ ನೀಡಿರಿ.

 

ನಿಮ್ಮದು ಸದಾ ಸತ್ಯದ ಪರವಾದ ಹೋರಾಟ. ಹಾಗಾಗಿ ಸಮಾಜದಲ್ಲಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುವುದು. ಸತ್ಯದ ಕೆಲಸಗಳಿಗಾಗಿ ನೀವು ಇಂದು ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಕಷ್ಟದ ದಿನಗಳು ಇನ್ನೂ ಮುಗಿದಿಲ್ಲ. ಹಾಗಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿರಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನ ಮಾಡಿರಿ.

 

 

ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಇಂದು ಹಣಕಾಸಿನ ನೆರವು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿರಿ.

 

 

ಸಮಯವೇ ದುಡ್ಡು’ ಎಂದು ಅನುಭಾವಿಗಳು ಹೇಳುತ್ತಾರೆ. ಈದಿನ ನನ್ನ ಸಮಯ ಸರಿಯಿಲ್ಲ ಎಂದು ಪರಿತಪಿಸುತ್ತಾ ಕಾಲಹರಣ ಮಾಡದಿರಿ. ಯಾವುದಾದರೊಂದು ಸಕಾರಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಆನಂದ ಹೊಂದಿರಿ.

 

 

ನಿಮ್ಮ ಬಂಧು ಬಳಗದವರು ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ.

 

 

ಬೆಲೆಬಾಳುವ ವಸ್ತುಗಳ ಕಣ್ಮರೆ ಸಾಧ್ಯತೆ. ಹಾಗಾಗಿ ಎಚ್ಚರದಿಂದ ಇರಿ. ಪ್ರಯಾಣದಲ್ಲಿ ಕೂಡ ಎಚ್ಚರದಿಂದ ಇರುವುದು ಒಳ್ಳೆಯದು. ನೀವು ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.

ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿರಿ.

 

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ದೊಡ್ಡವರ ಸಹವಾಸದಿಂದ ದೂರ ಇರುವುದು ಒಳ್ಳೆಯದು. ಇಲ್ಲದೇ ಇದ್ದಲ್ಲಿ ಅವರು ಮಾಡುವ ತಪ್ಪುಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇರುತ್ತದೆ.

 

ಎಲ್ಲ ಕೆಲಸ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲವು ಕೆಲಸಗಳು ಇನ್ನೂ ಹೆಚ್ಚಿನ ಪರಿಪಕ್ವತೆಯಿಂದ ಯಶಸ್ಸು ಹೊಂದುವುದು.

 

ದೃಢ ನಿರ್ಧಾರವನ್ನು ತಳೆಯುವಲ್ಲಿ ಹೆಸರು ವಾಸಿಯಾದ ನೀವು ಇಂದಿನ ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ ್ಮವಾಗಿ ಗಮನಿಸಿ ಅದರಲ್ಲಿ ವಿಜಯ ತಂದುಕೊಳ್ಳಲು ನಿಮ್ಮ ಪರಿಪಕ್ವ ಮನಸು ಸಹಾಯ ಮಾಡುವುದು. ಇದಕ್ಕೆ ಸಂಗಾತಿಯ ನೆರವು ಸಿಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top