fbpx
ಸಮಾಚಾರ

ನೆರೆ ಸಂತ್ರಸ್ತರಿಗೆ ಉಚಿತ ಮನೆಗಳನ್ನು ನೀಡಿದ ತಲೈವಾ ರಜನಿಕಾಂತ್!

ಸೂಪರ್ ಸ್ಟಾರ್ ರಜಿನಿ ಕಾಂತ್ ಸಿನಿಮಾ ರಂಗ ಮಾತ್ರವಲ್ಲದೇ ಸಾಮಾಜಿಕ ಸೇವೆ ಮಾಡೋದ್ರಲ್ಲಿ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಇತ್ತೀಚೆಗೆ ಮನೆ ಇಲ್ಲದೇ ಪರದಾಡುತ್ತಿದ್ದ ನಿರ್ಮಾಪಕರೊಬ್ಬರಿಗೆ ಕೋಟಿ ಮೊತ್ತದ ಮನೆಯೊಂದನ್ನು ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದ ರಜನಿ ಈಗ ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ..

 


ರಜನಿಕಾಂತ್ ಅವರು ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಯನ್ನು ನೀಡುವ ಮೂಲಕ ಸಹಾಯ ಹಸ್ತವನ್ನು ಚಾಚಿದ್ದಾರೆ. ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್‍ನಿಂದ ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ ಎಲ್ಲನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್ ಅವರು ನೆರೆ ಸಂತ್ರಸ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಜನಿಕಾಂತ್ ಅವರು ಇಂದು ತಮ್ಮ ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ಮನೆಯ ಹಕ್ಕು ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ರಜನಿಕಾಂತ್ ಸಂತ್ರಸ್ತರಿಗೆ ಮನೆಯ ಪತ್ರಗಳನ್ನು ನೀಡುತ್ತಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರ ಈ ಕೆಲಸ ನೋಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಮನೆಯನ್ನು ನಿರ್ಮಿಸಲು ಸುಮಾರು 1.85 ಲಕ್ಷ ಖರ್ಚು ಆಗಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಹತ್ತು ಮನೆಯನ್ನ ನಿರ್ಮಿಸಲಾಗಿದೆ. ಸೈಕ್ಲೋನ್ ನಲ್ಲಿ ಸುಮಾರು 50 ಜನರ ಮೃತಪಟ್ಟಿದ್ದರು. ಹಾಗೆ, ಅನೇಕ ಮಂದಿ ಮನೆಯನ್ನ ಕಳೆದುಕೊಂಡು, ಬೀದಿಗೆ ಬಂದಿದ್ದರು. ಮನೆಯನ್ನ ನಿರ್ಮಿಸುವುದರ ಜೊತೆಗೆ, ಆ ನಗರವನ್ನ ಮತ್ತೆ ಮೊದಲಿನಂತೆ ಮಾಡಲು ರಜನಿ ಮಕ್ಕಳ್ ಮಂದ್ರಮ್ ಸಹಕಾರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top