fbpx
ಸಮಾಚಾರ

ಅಕ್ಟೋಬರ್ 25: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಗುರುವಾರ, ಅಕ್ಟೋಬರ್ 24 2019
ಸೂರ್ಯೋದಯ : 6:10 am
ಸೂರ್ಯಾಸ್ತ: 5:56 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಆಶ್ವೇಜ
ಪಕ್ಷ : ಕೃಷ್ಣಪಕ್ಷ
ತಿಥಿ : ದ್ವಾದಶೀ 19:08
ನಕ್ಷತ್ರ: PurvaPhalguni 11:01
ಯೋಗ: ಬ್ರಹ್ಮ 09:57
ಕರಣ: ಕುಲವ 08:45 ತೈತುಲ 19:08

ಅಭಿಜಿತ್ ಮುಹುರ್ತ: 11:40 am – 12:26 pm
ಅಮೃತಕಾಲ : 2:02 am – 3:27 am

ರಾಹುಕಾಲ- 10:36 am – 12:03 pm
ಯಮಗಂಡ ಕಾಲ- 2:57 pm – 4:25 pm
ಗುಳಿಕ ಕಾಲ- 7:42 am – 9:09 am

 

 

 

ನಿಮ್ಮ ಮನಸ್ಸನ್ನು ಘಾಸಿಗೊಳಿಸಿ ದುರ್ಬಲರನ್ನಾಗಿ ಮಾಡುವ ಜನರನ್ನು ಅಲಕ್ಷಿಸಿಬಿಡಿ. ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿರಿ. ನಿಮ್ಮ ಮುಖದಲ್ಲಿ ಈದಿನ ಮಂದಹಾಸ ಮೂಡುವುದು.

ಗತದಿನಗಳ ಅವಮಾನಗಳನ್ನು ನೆನಪಿಸಿಕೊಂಡು ಹಿಂಸೆ ಅನುಭವಿಸದಿರಿ. ಹೊಸದಾದ ಸಂಕಲ್ಪ ನಿಮಗೆ ಹೊಸತನ ಮತ್ತು ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದು. ಈದಿನ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿರಿ.

 

ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು ಚಿಂತಿಸಿರಿ. ಸ್ನೇಹಿತರೊಂದಿಗೆ ಬೆರೆತು ಸಂತೋಷದಿಂದಿರಿ. ಎಲ್ಲವೂ ಭಗವಂತನ ಅಧೀನ, ಆತನ ಪ್ರೇರಣೆ ಇಲ್ಲದೆ ಜಗತ್ತಿನಲ್ಲಿ ಏನೊಂದೂ ನಡೆಯುವುದಿಲ್ಲ ಎಂಬ ಸತ್ಯದ ಅರಿವಾಗುತ್ತದೆ.

 

ಜಗತ್ತಿನ ಎಲ್ಲ ಕಷ್ಟಗಳು ನನಗೆ ಬಂದಿವೆ, ನನ್ನಷ್ಟು ಕಷ್ಟ ಬೇರೆ ಯಾರೂ ಅನುಭವಿಸಿಲ್ಲ ಎನ್ನುವುದು ನಿಮ್ಮ ಕೊರಗು. ಆದರೆ ವಸ್ತುಸ್ಥಿತಿ ಹಾಗಿಲ್ಲ. ಭಗವಂತನ ಪ್ರೀತಿಗೆ ಪಾತ್ರರಾದವರಿಗೆ ಹೆಚ್ಚು ಕಷ್ಟಗಳು. ಈ ಬಗ್ಗೆ ಹೆಮ್ಮೆ ಪಡಿ.

 

 

ಕೂಡಿಟ್ಟ ಹಣ ಇಂದು ನೀರಿನಂತೆ ಖರ್ಚಾಗುವುದು. ಹಾಗಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ. ಸಂಗಾತಿಯ ಹಿತನುಡಿಗಳನ್ನು ಆಲಿಸುವುದು ಕ್ಷೇಮಕರ. ಗುರು ಹಿರಿಯರನ್ನು ಗೌರವಿಸಿರಿ.

 

 

ಹೊಗಳಿಕೆಗೆ ಮನಸೋತು ಕೆಲವೊಮ್ಮೆ ಇಲ್ಲ-ಸಲ್ಲದ ಮಾತುಗಳು ನಿಮ್ಮ ಬಾಯಿಂದ ಹೊರ ಬರುವುದು. ಮಾತಿನ ಮೇಲೆ ಹಿಡಿತವಿರಲಿ. ಯಾರಾದರೂ ಹೊಗಳಿದರೆ ನಕ್ಕು ಸುಮ್ಮನಾಗಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು.

 

 

ನೆರೆಹೊರೆಯವರೊಂದಿಗೆ ಸೌಹಾರ್ದಯುತ ವಾತಾವರಣ. ಶರೀರದಲ್ಲಿ ಆರೋಗ್ಯ, ಬಂಧುಮಿತ್ರರೊಡನೆ ಭೋಜನ. ನಿಮ್ಮ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಹಣಕಾಸು ಉತ್ತಮವಾಗಿರುವುದು.

 

 

ಸೂಕ್ತ ಸಮಯಕ್ಕೆ ತೆಗೆದುಕೊಂಡ ನಿರ್ಣಯಗಳು ನಿಮಗೆ ಯಶಸ್ಸು, ಕೀರ್ತಿ ತಂದುಕೊಡುವುದು. ಋುಣಾತ್ಮಕವಾಗಿ ಚಿಂತಿಸದೆ ಧನಾತ್ಮಕವಾಗಿ ಚಿಂತಿಸಿರಿ. ಆರೋಗ್ಯದಲ್ಲಿ ಉತ್ತಮ.

ನಿಮ್ಮ ಇಚ್ಛೆಗೆ ವಿರುದ್ಧವಾದ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸು ವ್ಯಾಕುಲತೆಯಿಂದ ತುಂಬಿ ಹೋಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ಒಳಿತಾಗುವುದು.

 

ಕೆಲವರು ಈದಿನ ಮಂಕು ಕವಿದಂತೆ ಯಾವುದೂ ಕೆಲಸ ಮಾಡಲು ಇಷ್ಟ ಇಲ್ಲದೆ ಕಾಲ ಕಳೆಯುವಿರಿ. ಕೆಲವರು ಅಶುಭ ವಾರ್ತೆಯನ್ನು ಕೇಳಲಿದ್ದೀರಿ. ಆದರೆ ಸಂಜೆಯ ವೇಳೆಗೆ ಎಲ್ಲ ತಪ್ಪು ಕಲ್ಪನೆಗಳು ಕರಗಿ ಹೋಗುವವು.

 

ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸದೇ ಆದ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ಈದಿನ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿರಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ಈದಿನ ತಪ್ಪದೇ ಹೋಗಿ ಬನ್ನಿರಿ. ಭಗವಂತ ನಿಮಗೆ ಅಭಯ ನೀಡುವನು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top