fbpx
ಸಮಾಚಾರ

ಸಂಗೀತಾ ಭಟ್ ಗಂಡನ ವಿವಾದ: ಬಹಿರಂಗ ಪತ್ರ ಬರೆದ ಯಶ್ ಅಭಿಮಾನಿಗಳು

ಎರಡು ವರ್ಷದ ಹಿಂದೆ ಸುದರ್ಶನ್ ಒಂದು ಕಾಮಿಡಿ ವಿಡಿಯೋ ಮಾಡಿದ್ದರು. ಅಲ್ಲಿ ಯಶ್ ಅವರ ಡೈಲಾಗ್ ಬಳಸಿ ಕಾಮಿಡಿ ಮಾಡಿದ್ದರು. ”ನಾವು ಸೆಕೆಂಡ್ ಪಿಯುಸಿ ಇದ್ದಾಗ ಮನೆಯವರು, ಸಂಬಂಧಿಗಳು ಬರೀ ‘ಬಿಲ್ಡಪ್ ಡೈಲಾಗ್’ ಹೊಡೆಯುತ್ತಿದ್ದರು. ಅದೇ ನಮ್ ರಾಕಿಂಗ್ ಸ್ಟಾರ್ ಯಶ್ ತರ” ಎಂದು ಸುದರ್ಶನ್ ರಂಗಪ್ರಸಾದ್ ಹೇಳಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ‘ಅಣ್ತಾಮ್ಮ’, ‘ಹವಾ’ ಎಂದು ಯಶ್ ಡೈಲಾಗ್ ಅನ್ನು ಇಮಿಟೇಟ್ ಮಾಡಿದ್ದರು.

 

 

ಈ ಕಾಮಿಡಿ ವಿಡಿಯೋವನ್ನು ಸಹಿಸದ ಯಶ್ ಅಭಿಮಾನಿಗಳು ಬಾಯಿಗೆ ಬಂದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ, ಈ ಬಗ್ಗೆ ಮೂರ್ನಾಲ್ಕು ದಿನಗಳ ಹಿಂದೆ ಸುದರ್ಶನ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು, ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮೆಸೇಜ್ ಮಾಡಿರುವ ಸ್ಕ್ರೀನ್​ಶಾಟ್​ಗಳನ್ನು ಫೇಸ್​ಬುಕ್​ನಲ್ಲಿ ಹಾಕಿದ್ದರು. ಅಷ್ಟೇ ಅಲ್ಲದೆ ಸೈಬರ್ ಕ್ರೈಮ್‌ಗೂ ಈ ಬಗ್ಗೆ ದೂರು ಸಹ ನೀಡಿದ್ದರು. “ಆದಾಗ್ಯೂ ಸುಮ್ಮನಾಗದ ಯಶ್ ಅಭಿಮಾನಿಗಳು ತಮ್ಮ ವಿರುದ್ಧ ವಯಕ್ತಿಕವಾಗಿ ಅಶ್ಲೀಲ ಕಾಮೆಂಟ್ ಮಾಡುತ್ತಿದ್ದಾರೆ” ಎಂದು ನಟಿ ಸಂಗೀತ ಆರೋಪಿಸಿದ್ದಾರೆ.

ಈ ಟೀಕೆ, ನಿಂದನೆ ತೀರಾ ವೈಯಕ್ತಿಕವಾದ ಕಾರಣ ಸಂಗೀತ ಭಟ್ ಕೂಡ ಬಹಿರಂಗವಾಗಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿ, ಯಶ್ ಮತ್ತು ರಾಧಿಕಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಇದೀಗ, ಈ ಘಟನೆ ಬಗ್ಗೆ ಯಶ್ ಅಭಿಮಾನಿಗಳು ಬಹಿರಂಗ ಪತ್ರ ಬರೆದಿದ್ದು, ಈ ಎಲ್ಲ ವಿವಾದಕ್ಕೆ ತೆರೆ ಎಳೆದಿದ್ದಾರೆ. ಯಶ್ ಅಭಿಮಾನಿಗಳು ಬರೆದಿರುವ ಬಹಿರಂಗ ಪತ್ರ ಈ ರೀತಿ ಇದೆ.

ಬಹಿರಂಗ ಪತ್ರ:
ನಮಸ್ಕಾರ ರಾಕಿಂಗ್ ಸ್ಟಾರ್ ಯಶ್ ಬಾಸ್ ಅಭಿಮಾನಿ ಗೆಳೆಯರೆಲ್ಲಾರಿಗೂ… ಕಳೆದೆರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಾಕಿ ಭಾಯ್ ಹೆಸರನ್ನ ಬಳಸಿಕೊಂಡು ಅಪಹಾಸ್ಯ ಮಾಡಿದ ಸುದರ್ಶನ್ ಅವ್ರ ವಿಡಿಯೋಗೆ ನಮ್ಮ ಅಭಿಮಾನಿ ಬಳಗದಿಂದ ವ್ಯಾಪಕ ಖಂಡನೆ ವ್ಯಕ್ತವಾಗ್ತಿರೋದನ್ನ ಗಮನಿಸಿ, “ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಘ” ದಿಂದ ಈ ಬಹಿರಂಗ ಪತ್ರ…

ಆತ್ಮೀಯ ಅಭಿಮಾನಿ ಗೆಳೆಯರಲ್ಲಿ ಮನವಿ.

ರಾಕಿಂಗ್ ಸ್ಟಾರ್ ಅಭಿಮಾನಿಗಳು ಅಂದ್ರೆ ಸಾಮಾಜಿಕ ಕಳಕಳಿ ಇರೋರು, ಜವಾಬ್ದಾರಿ ಇರೋರು, ಸ್ನೇಹಕ್ಕೆ- ಪ್ರೀತಿಗೆ ಬೆಲೆ ಕೊಡೋರು. ಆದ್ರೆ ನಮ್ಮನ್ನ ಕೆಣಕಿದೋರಿಗೆ ಯಾವ ಮುಲಾಜು ಇಲ್ದೇ ಪಾಠ ಕಲಿಸ್ತಿವಿ ನಿಜ. ಹಾಗೇ ಅಣ್ಣನ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ಬಗ್ಗೆ ಅವರ ಅಭಿಮಾನಿಗಳಾಗಿ ನಾವು ಕೆರಳವುದು, ಅವರನ್ನ ಖಂಡಿಸುವುದು ಸಹಜ. ಆದರೆ ನಾವು ಹೆಣ್ಣಿನ ಬಗ್ಗೆ ಕೆಟ್ಟ ಪದಗಳನ್ನ ಬಳಸುವ ಹಂತಕ್ಕೆ ಹೋಗುವುದು ಬೇಡ. ನಮ್ಮ ಅಭಿಮಾನಿ ಬಳಗ ಅದನ್ನ ಒಪ್ಪುವುದಿಲ್ಲ. ಯಶ್ ಬಾಸ್ ಮಹಿಳೆಯರನ್ನ ಗೌರವಿಸೋದ್ರಲ್ಲಿ ಎಲ್ಲಾರಿಗೂ ಮಾದರಿಯಾಗಿದ್ದಾರೆ. ಅಂತವರ ಅಭಿಮಾನಿಗಳಾದ ನಾವು ಅವ್ರ ಹಾದಿಯಲ್ಲೇ ಸಾಗಬೇಕು. ದಯವಿಟ್ಟು ಪ್ರೀತಿ- ಅಭಿಮಾನದ ಭರದಲ್ಲಿ, ಬಳಸೋ ಭಾಷೆಯ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಸಾಮಾಜಿಕ ಪ್ರಜ್ಞೆಯಿಂದ ನಾವು ವರ್ತಿಸಬೇಕು. ಯಾರೋ ಒಬ್ಬರೋ ಇಬ್ಬರೋ ಮಾಡುವ ಆಚಾತುರ್ಯದಿಂದ ಇಡೀ ಯಶ್ ಬಾಸ್ ಅಭಿಮಾನಿ ವೃಂದಕ್ಕೆ ಮಸಿಬಳಿದಂತಾಗುತ್ತೆ. ಸಿಟ್ಟಿನಲ್ಲಿ ನಾವು ಬಳಸುವ ಭಾಷೆಯನ್ನ ಹಿಡಿತದಲ್ಲಿ ಇಟ್ಟುಕೊಳ್ಳೋಣ. ಮಹಿಳೆ ಬಗ್ಗೆ ಕೆಟ್ಟಪದಗಳನ್ನ ಬಳಸಿ, ನಾವು ಗೌರವಿಸುವ ನಮ್ಮ ಪ್ರೀತಿಯ ರಾಕಿಂಗ್ ಸ್ಟಾರ್ ಯಶ್ ಬಾಸ್ ಗೆ ಬೇಸರ ತರುವುದು ಬೇಡ. ಅವರು ಯಾವಾಗಲೂ ಹೇಳುವಂತೆ, ಮಹಿಳೆಯನ್ನ ಗೌರವಿಸೋಣ. ಸ್ವಾಸ್ತ್ಯ ಸಮಾಜಕ್ಕೆ ನಾಂದಿ ಹಾಡೋಣ.

ಸುದರ್ಶನ್ ಅವ್ರೇ, ನಿಮ್ಮ ವಿಡಿಯೋ ನೋಡಿ, ನಿಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರೋದು ಅಥವಾ ಕಮೆಂಟ್ ಮಾಡಿರೋದು ತಪ್ಪು. ಹೇಗೆ ಅದನ್ನ ತಪ್ಪು ಅಂತ ನಾವು ಓಪ್ಪಿಕೊಳ್ಳುತ್ತಿದ್ದೇವೋ.. ಹಾಗೇ ನಾವು ಆರಾಧಿಸುವ ಅಭಿಮಾನಿಸುವ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಯಶ್ ಬಾಸ್ ಬಗ್ಗೆ, ನೀವು ಅಪಹಾಸ್ಯ ಮಾಡಿ ರಂಜಿಸೋ ಪ್ರಯತ್ನ ಮಾಡಿರೋದು ಅಷ್ಟೇ ದೊಡ್ಡ ತಪ್ಪು.

ಹಾಸ್ಯ ಮಾಡುವವರಿಗೆ ವಾಕ್ ಸ್ವಾತಂತ್ರ್ಯಯಿರುವ ಹಾಗೇ ಅಭಿಮಾನಿಗಳಾದ ನಮಗೂ ವಾಕ್ ಸ್ವಾತಂತ್ರವಿದೆ. ನಾವು ಪ್ರೀತಿಸುವವರನ್ನ, ಆರಾಧಿಸುವವರನ್ನ ಮತ್ತೊಬ್ಬರು ಅಪಹಾಸ್ಯ ಮಾಡಿದಾಗ.ಅಥವಾ ಅವಮಾನ ಮಾಡಿದಾಗ ಅಭಿಮಾನಿಗಳಾದ ನಾವು ಸಿಟ್ಟಿಗೇಳುವುದು ಸಹಜ. ಅದ್ರಲ್ಲೂ ಒಬ್ಬ ಘನತೆ ಇರೋ ದೊಡ್ಡ ವ್ಯಕ್ತಿ ಬಗ್ಗೆ, ಮಾತನಾಡುವಾಗ, ನಿಮ್ಮ ಮಾತಿನದಾಟಿ ಅಷ್ಟೇ ಅಲ್ಲ, ನಿಮ್ಮ ಹಾವಭಾವ ಮತ್ತು ಆಂಗೀಕ ಭಾಷೆಯ ಮೇಲೆ ಹಿಡಿತವರಬೇಕು. ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಶುಭವಾಗ್ಲಿ. ಇನ್ನು ಮುಂದೆ ನೀವು ಯಾವುದೇ ವೇದಿಕೆಗಳಲ್ಲಿ ಹಾಸ್ಯ ಮಾಡುವಾಗ ಈ ವಿಚಾರಗಳನ್ನ ಮನದಲ್ಲಿಟ್ಟುಕೊಂಡು ಜಾಗ್ರತೆಯಿಂದ, ಜವ್ದಾರಿಯಿಂದ ವರ್ತಿಸಿ, ರಂಜಿಸಿದ್ರೆ ಅದು ನಿಮಗೆ ಒಳ್ಳೆಯದು.

ಅಭಿಮಾನಿ ಗೆಳೆಯರೇ ಈಗಾಗ್ಲೇ ಸುದರ್ಶನ್ ಅವರ ಮಾಡಿರೋ ವಿಡಿಯೋಗೆ, ನಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿಯಾಗಿದೆ. ಅದಕ್ಕೆ ಸುದರ್ಶನ್ ಅವ್ರು ಕೂಡ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳಿದವರನ್ನ ಕ್ಷಮಿಸಿ, ಬಿಡುವುದು ದೊಡ್ಡ ಗುಣ. ಇದನ್ನ ಮುಂದುವರೆಸುವುದು ಬೇಡ. ಸುದರ್ಶನ್ ಅವ್ರು ಸಹ ಈ ವಿಚಾರವನ್ನ ಇಲ್ಲಿಗೆ ಬಿಟ್ಟರೆ ಒಳ್ಳೆಯದು.

ನಮಸ್ಕಾರಗಳೊಂದಿಗೆ
ಅಧ್ಯಕ್ಷರು
“ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಂಘ”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top