fbpx
ಸಮಾಚಾರ

ಅತ್ಯಾಚಾರ ಆರೋಪ ಪ್ರಕರಣ: ವಾರದೊಳಗೆ ಸಾಧು ಕೋಕಿಲಾ ಅರ್ಜಿಗೆ ಉತ್ತರಿಸಲು ಕೋರ್ಟ್ ಸೂಚನೆ.

ನಟ ಸಾಧು ಕೋಕಿಲ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ತನ್ನ ವಿರುದ್ಧದ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು ಸಾಧು ಕೋಕಿಲ. ಈ ಸಂಬಂಧ ಸಾಧು ಕೋಕಿಲ ಅರ್ಜಿಯನ್ನು ನ್ಯಾಯಮೂರ್ತಿ ಪಿಬಿ ಭಜಂತ್ರಿ ಅವರಿದ್ದ ಏಕಸದಸ್ಯಪೀಠ ಬುಧವಾರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಾರದ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

 

ತನ್ನ ವಿರುದ್ಧದ ಪ್ರಕರಣಕ್ಕೆ ಯಾವುದೇ ಸಾಕ್ಷಿಗಳಿಲ್ಲ, ಪ್ರಕರಣ ಮುಂದುವರೆದಲ್ಲಿನನ್ನ ತೇಜೋವಧೆ ಆಗಲಿದೆ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸಿಲ್ಲ,ನಾನು ಅಲ್ಲಿಗೆ ಹೋಗಿಯೇ ಇಲ್ಲ ಎಂದ ಮೇಲೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಪ್ರಕರಣ ರದ್ದು ಮಾಡಬೇಕೆಂದು ಸಾಧು ಕೋಕಿಲ ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಹೈಕೋರ್ಟ್.

ಏನಿದು ಪ್ರಕರಣದ:
ಮೈಸೂರಿನ ಮಸಾಜ್ ಪಾರ್ಲರ್ ವೊಂದಕ್ಕೆ ಸಾಧು ಕೋಕಿಲಾ ಹೋಗುತ್ತಾರೆ. ಮಸಾಜ್ ಪಾರ್ಲರ್ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಭಂದ 2017ರ ಅಕ್ಟೋಬರ್ 20ರಂದು ಈ ಕುರಿತು ಸರಸ್ವತಿ ಪುರಂ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ನಂತರ ಸಾಧು ಕೋಕಿಲಾ ಮೇಲೆ ಚಾರ್ಜ್ ಶೀಟ್ ಹಾಕಲಾಗಿತ್ತು. ಆದ್ದರಿಂದ ಪ್ರಕರಣದ ದೋಷಾರೋಪಣ ಪಟ್ಟಿಯನ್ನು ರದ್ದು ಕೋರಿ ಸಾಧು ಕೋಕಿಲಾ ಅರ್ಜಿ ಸಲ್ಲಿಸಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top