fbpx
ಸಮಾಚಾರ

“ಒಬ್ಬಳೇ ಬಾ ಎಂದಿದ್ದ” ಹಿಂದಿ ಸ್ಟಾರ್ ನಟನ ವಿರುದ್ಧ ಗಂಭೀರ ಆರೋಪ ಮಾಡಿದ ಸೂರ್ಯವಂಶ ನಟಿ ಇಶಾ ಕೊಪ್ಪಿಕರ್

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ..

 

 

. ಇದೀಗ, ನಟಿ ಇಶಾ ಕೊಪ್ಪಿಕರ್ ಈ ಬಗ್ಗೆ ಮಾತನಾಡಿದ್ದಾರೆ. ಹೆಸರು ಹೇಳದೇ ಸೂಪರ್ ಸ್ಟಾರ್ ಒಬ್ಬರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ ಸಿನಿಮಾ ವೆಬ್ ಸೈಟ್ ವೊಂದು ನಡೆಸಿರುವ ಸಂದರ್ಶನದಲ್ಲಿ ಈ ವಿಷಯವನ್ನು ಇಶಾ ಹೇಳಿಕೊಂಡಿದ್ದಾರೆ.

ತಮ್ಮ ಬಾಲಿವುಡ್‌ ಪಯಣದ ಬಗ್ಗೆ ಮಾತನಾಡುತ್ತಾ ಇಶಾ ಈ ವಿಚಾರ ಪ್ರಸ್ತಾಪಿಸಿದ್ದು, ನಿರ್ಮಾಪಕರೊಬ್ಬರು ಸಹನಟರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕೆಂದು ಹೇಳಿದ್ದರು. ಅಲ್ಲದೇ ಸಿನಿಮಾ ಸಂಬಂಧ ನಟರೋರ್ವರಿಗೆ ಕರೆ ಮಾಡಿ ಮಾತನಾಡಬೇಕು ಎಂದು ಹೇಳಿದ್ದರು. ಅವರಿಗೆ ನಾನು ಕರೆ ಮಾಡಿದಾಗ, ಯಾರೆಲ್ಲಾ ಬರುತ್ತೀದ್ದೀರಿ ಎಂದು ಕೇಳಿದರು.

ಡ್ರೈವರ್‌ ಜತೆ ಬರುತ್ತೇನೆ ಎಂದು ಹೇಳಿದ್ದೆ. ಆಗ ಆ ನಟ ನೀನು ಒಬ್ಬಳೆ ಬಾ ಎಂದು ಪೀಡಿಸಿದನಂತೆ. ಇದರಿಂದ ಪರಿಸ್ಥಿತಿಯನ್ನು ಅರಿತ ಇಶಾ ಕೊಪ್ಪಿಕರ್ ಆ ನಟನಿಂದ ದೂರ ಸರಿದರಂತೆ. ನನ್ನ ಪ್ರತಿಭೆ ನೋಡಿ ಅವಕಾಶ ನೀಡುವ ಆಗಿದ್ದರೆ ಮಾತ್ರ ತಿಳಿಸಿ ಎಂದು ನಿರ್ಮಾಪಕರಿಗೆ ಹೇಳಿದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top