fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಎಂಟ್ರಿ ಕೊಟ್ಟ ಕನ್ನಡ ರಾಪರ್ ಅಲೋಕ್.

ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ತಮ್ಮದೇ ಹಾಡುಗಳ ಮೂಲಕ ಗುರುತಿಸಿಕೊಂಡಿರುವ ರ‍್ಯಾಪರ್ ಆಲ್ ಓಕೆ ಅಲಿಯಾಸ್ ಅಲೋಕ್ ಆರ್ ಬಾಬು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳತಿ ನಿಶಾ ನಟರಾಜನ್ ಅವರ ಜೊತೆಗೆ ಅಲೋಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

 

ಆಲ್ ಓಕೆ ಮತ್ತು ನಿಶಾ ಪರಸ್ಪರ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೆ ತಮ್ಮ ಗೆಳತಿಯ ಜೊತೆ ಎಂಗೇಜ್ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೀಗ ಎರಡೂ ಕುಟುಂಬದವರು ಒಪ್ಪಿ ಇಬ್ಬರಿಗೂ ವಿವಾಹ ಮಾಡಿಸಿದ್ದಾರೆ. ಕನ್ನಡ ಬ್ರಾಹ್ಮಣ ಮತ್ತು ತಮಿಳಿನ ಐಯ್ಯರ್ ಸಂಪ್ರದಾಯದಂತೆ ಮದುವೆ ನಡೆದಿದೆ.

ಎನ್.ಜಿ.ಓ ಒಂದರಲ್ಲಿ ನಿಶಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ರಾಪರ್ ಆಗಿ ಗುರುತಿಸಿಕೊಂಡಿರುವ ಅಲೋಕ್ ಬಾಬು ‘ಜೋಶ್’, ‘ಮಂದಹಾಸ’, ‘ನಿನ್ನಿಂದಲೇ’, ‘ಸಿದ್ದಾರ್ಥ’, ‘ಗಜಕೇಸರಿ’, ‘ತಾರಕ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top