fbpx
ಸಮಾಚಾರ

ಬಿಗ್​ ಬಾಸ್​ ಮನೆಯಲ್ಲಿ ಭೂಮಿ ಶೆಟ್ಟಿ-ದೀಪಿಕಾ ಲಿಪ್​ಲಾಕ್: ದಂಗಾದ ಸಹಸ್ಪರ್ದಿಗಳು, ವಿಡಿಯೋ ವೈರಲ್!

ಕನ್ನಡ ಬಿಗ್​ ಬಾಸ್​ 7 ಮನೆಯಲ್ಲಿ ಅಚ್ಚರಿ ಎಂಬಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಈ ಬಾರಿಯ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಸೆಲೆಬ್ರಿಟಿಗಳೇ ಇರುವುದು ಮತ್ತೊಂದು ವಿಶೇಷ. ಅದರಲ್ಲೂ ಈ ಬಾರಿ ಹೆಚ್ಚು ಸುದ್ದಿ ಮಾಡಿದ್ದು ಕಿಸ್ಸಿಂಗ್​ ವಿಚಾರ.

 

 

ಹೌದು, ಬಿಗ್ ಬಾಸ್ ಮನೆಯಲ್ಲಿ ನಟಿಯರಾದ ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ್ದಾರೆ. ಇದನ್ನು ನೋಡಿದ ವಾಸುಕಿ ವೈಭವ್ ಶಾಕ್ ಆಗಿದ್ದಾರೆ. ದೀಪಿಕಾ ಹಾಗೂ ಭೂಮಿ ಬೆಳಗ್ಗೆ ಎದ್ದ ತಕ್ಷಣ ಪರಸ್ಪರ ಲಿಪ್ ಕಿಸ್ ಮಾಡಿದ್ದಾರೆ. ಇದೇ ವೇಳೆ ಕಣ್ಣು ಉಜ್ಜಿಕೊಂಡು ಬರುತ್ತಿದ್ದ ವಾಸುಕಿ ಇಬ್ಬರು ಲಿಪ್ ಲಾಕ್ ಮಾಡುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ಈ ಬಗ್ಗೆ ವಾಸುಕಿ ನಟ ಹರೀಶ್ ಅವರ ಬಗ್ಗೆ ಹೇಳಿದ್ದಾರೆ.

ಬೆಳಬೆಳಗ್ಗೆ ತುಟಿಗೆ ತುಟಿ ಕೊಟ್ಟು ಕಿಸ್ ಮಾಡಿದ್ದನ್ನು ಕಂಡ ವಾಸುಕಿ ಅದನ್ನು ಹರೀಶ್ ರಾಜ್ ಅವರ ಬಳಿ ಹೇಳಲು ಬಂದಿದ್ದಾರೆ. ಏನು ಸಾರ್ ಇವರೆಲ್ಲಾ? ಅಂದುಕೊಂಡು ಬಂದಾಗ ಮತ್ತೆ ದೀಪಿಕಾ ಹತ್ತಿರಕ್ಕೆ ಬಂದ ಭೂಮಿ ಶೆಟ್ಟಿ ದೀಪಿಕಾರ ತುಟಿಗೆ ಮುತ್ತಿಟ್ಟಿದ್ದಾರೆ, ಬೇಕಾದರೆ ನೀವು ಅಂದರೆ ಹರೀಶ್ ರಾಜ್ ಮತ್ತು ವಾಸುಕಿ ಕಿಸ್ ಮಾಡಿಕೊಳ್ಳಿ ಎಂಬ ಪುಕ್ಕಟೆ ಸಲಹೆಯನ್ನು ನೀಡಿದ್ದಾರೆ.

ಸದ್ಯ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top