fbpx
ಸಮಾಚಾರ

ಡಿಕೆಶಿ ಪತ್ನಿ ಮತ್ತು ತಾಯಿಗೆ ಬಿಗ್ ರಿಲೀಫ್

ಮುಂದಿನ ಆದೇಶದವರೆಗೂ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡದಂತೆ ಇಡಿ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ನಾಳೆ ನಡೆಯಬೇಕಿದ್ದ ವಿಚಾರಣೆಯಿಂದಲೂ ರಿಲೀಫ್ ಕೊಟ್ಟಿದೆ.

ಇತ್ತೀಚೆಗೆ ಡಿಕೆಶಿ ತಾಯಿ ಮತ್ತು ಪತ್ನಿ ತಮಗೆ ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ತಾಯಿ ಪರವಾಗಿ ವಾದ ಮಂಡಿಸಿದ ವಕೀಲ ದಯಾನ್ ಕೃಷ್ಣನ್, ಗೌರಮ್ಮಗೆ 85 ವರ್ಷ. ಸಿಆರ್‌ಪಿಸಿ ಅನ್ವಯ 65 ವರ್ಷ ಮೇಲ್ಪಟ್ಟವರಿಗೆ ಪೊಲೀಸ್​​ ಠಾಣೆಗೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡುವಂತಿಲ್ಲ ಎಂದಿದ್ದರು. ಜತೆಗೆ ಅನಾರೋಗ್ಯದ ಕಾರಣ ಡಿಕೆಶಿ ತಾಯಿ ಮತ್ತು ಪತ್ನಿ ಇಬ್ಬರ ವಿಚಾರಣೆಯೂ ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿದ್ದರು.

ವಾದ ಮಂಡನೆಗೆ ನವೆಂಬರ್​ 15 ವರೆಗೆ ಸಮಯವನ್ನು ನೀಡಿ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಅಮಿತ್ ಮಹಾಜನ್ ಕೇಳಿದ್ದರು. ಅಂದೇ ವಾದ ಮಾಡಲೇಬೇಕೆಂದು ವಾದ ಮಾಡದಿದ್ದರೂ ಆದೇಶ ನೀಡುತ್ತೇನೆ ಎಂದು ಇಡಿ ವಕೀಲರಿಗೆ ಜಡ್ಜ್ ಬ್ರಿಜೇಶ್ ಸೇಥಿ ಖಡಕ್ ಸೂಚನೆ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್​ ರದ್ದು ಕೋರಿ ಡಿಕೆಶಿ​​ ತಾಯಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನವೆಂಬರ್​ 15ಕ್ಕೆ ದೆಹಲಿ ಹೈಕೋರ್ಟ್​​ನಲ್ಲಿ ಮುಂದೂಡಿದೆ. ಜಡ್ಜ್ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದ್ದು, ವಾದ-ಪ್ರತಿವಾದ ಆಲಿಸಲಿದೆ. ಈಗಾಗಲೇ ಹೈಕೋರ್ಟ್​ ಐದು ಬಾರಿ ಅರ್ಜಿ ವಿಚಾರಣೆ ಮುಂದೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top