fbpx
ಸಮಾಚಾರ

“ವಿದೇಶಿ ಹಸುಗಳು ಗೋಮಾತೆಯಲ್ಲ, ಅವು ಆಂಟಿಗಳು” ಬಿಜೆಪಿ ನಾಯಕ

ಭಾರತದಲ್ಲಿರುವ ದೇಸಿ ಹಸುಗಳು ಉತ್ಪಾದಿಸುವ ಹಾಲಿನಲ್ಲಿ ಚಿನ್ನದ ಅಂಶವಿದೆ. ಅದೇ ರೀತಿ, ಭಾರತೀಯ ತಳಿಯ ಹಸುಗಳು ಗೋಮಾತೆಯೇ ಹೊರತು, ವಿದೇಶಿ ಹಸುಗಳಲ್ಲ. ಅವುಗಳು ಆಂಟಿಗಳು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್​ ಹೇಳಿರುವುದು ಈಗ ಟೀಕೆಗೊಳಗಾಗಿದೆ. ಪಶ್ಚಿಮ ಬಂಗಾಳದ ಬುರ್ವಾನ್​ನಲ್ಲಿ ಗೋಪ ಅಸ್ಥಮಿ ಹೆಸರಿನ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಇಂಥ ಹೇಳಿಕೆಯನ್ನ ಕೊಟ್ಟಿದ್ದಾರೆ.

ಗೋವು ನಮ್ಮ ತಾಯಿ. ಹಸುವಿನ ಹಾಲು ಸೇವಿಸಿ ನಾವು ಜೀವಂತವಾಗಿದ್ದೇವೆ. ನಮ್ಮ ತಾಯಿಯೊಂದಿಗೆ ಯಾರದರು ಅಸಭ್ಯವಾಗಿ ನಡೆದುಕೊಂಡರೆ ಸುಮ್ಮನೆ ಇರುವುದಿಲ್ಲ. ಅವರಿಗೆ ಯಾವ ರೀತಿ ಪಾಠ ಕಲಿಸಬೇಕೋ ಹಾಗೆ ಕಲಿಸುತ್ತೇವೆ. ಪವಿತ್ರ ಭೂಮಿಯಲ್ಲಿ ಗೋವು ಹತ್ಯೆ ಹಾಗೂ ಗೋ ಮಾಂಸ ತಿನ್ನುವುದು ಅಪರಾಧ ಎಂದು ಹೇಳಿದ್ದಾರೆ.

ದನದ ಹಾಲಿನಲ್ಲಿ ಚಿನ್ನ
“ಭಾರತೀಯ ತಳಿಯ ಹಸುಗಳು ವಿಶೇಷ ಗುಣವನ್ನು ಹೊಂದಿವೆ. ಅವುಗಳ ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ. ಅದಕ್ಕಾಗಿಯೇ ಅವುಗಳ ಹಾಲಿನ ಬಣ್ಣ ಸ್ವಲ್ಪ ಹಳದಿ ಬಣ್ಣ ಇರುತ್ತದೆ. ಹಸುವಿನ ಹೊಕ್ಕುಳವು ಬಿಸಿಲಿನ ಸಹಾಯದಿಂದ ಚಿನ್ನವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.

ವಿದೇಶದ ದನಗಳು ಆಂಟೀಸ್:
ವಿದೇಶಗಳಿಂದ ಬರುವ ತಳಿಗಳು ಹಸುಗಳಲ್ಲ. ಅವು ಮೃಗಗಳಂತೆ. ವಿದೇಶಿ ತಳಿಗಳು ಹಸುಗಳಂತೆ ಇರುವುದಿಲ್ಲ. ಅವು ನಮ್ಮ ಗೋಮಾತೆಗಳಲ್ಲ. ಆಂಟಿಗಳು, ಅಂತವುಗಳನ್ನು ಪೂಜಿಸುವುದು ಒಳ್ಳೆಯದಲ್ಲ ಎಂದರು.

ಬುದ್ದಿ ಜೀವಿಗಳು ನಾಯಿ ಮಾಂಸ ತಿನ್ನಲಿ
ಇಷ್ಟೇ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅವರು, ರಸ್ತೆಯಲ್ಲಿ ಗೋಮಾಂಸ ತಿನ್ನುವ ಕೆಲವು ಬುದ್ದಿಜೀವಿಗಳು ತಮ್ಮ ಮನೆಗಳಲ್ಲಿ ನಾಯಿ ಮಾಂಸ ತಿನ್ನಲಿ ಎಂದಿದ್ದಾರೆ. ಕೆಲ ಬುದ್ದಿಜೀವಿಗಳು ರಸ್ತೆಯಲ್ಲಿ ಗೋಮಾಂಸ ತಿನ್ನುತ್ತಾರೆ. ಅಂತವರಿಗೆ ನಾಯಿ ಮಾಂಸ ಕೂಡ ತಿನ್ನಿ ಎಂದು ಹೇಳುತ್ತೇನೆ. ಅಂತವರು ಯಾವ ಪ್ರಾಣಿಯ ಮಾಂಸ ತಿಂದರೂ ಕೂಡ ಅವರ ಆರೋಗ್ಯ ಚೆನ್ನಾಗಿರುತ್ತದೆ. ಹೀಗಿರುವಾಗ ರಸ್ತೆಯಲ್ಲಿ ಏಕೆ ತಿನ್ನಬೇಕು, ತಮ್ಮ ತಮ್ಮ ಮನೆಗಳಲ್ಲಿ ತಿಂದುಕೊಳ್ಳಲಿ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top