fbpx
ಸಮಾಚಾರ

ಇನ್ಮುಂದೆ ನಿಮ್ಮ ಓಟರ್ ಐಡಿ ಕಳೆದುಹೋದರೆ ತಕ್ಷಣ ನೀವು ಈ ಕೆಲಸವನ್ನು ಮಾಡಲೇಬೇಕು.

ಆಧಾರ್ ಕಾರ್ಡ್ ಪ್ರಭಾವದಿಂದ ಓಟರ್ ಐಡಿ ಇತ್ತೀಚಿನದಿನಗಲ್ಲಿ ಹೆಚ್ಚಾಗಿ ಕೆಲಸಕ್ಕೆ ಬಾರದೆ ಇದ್ದರೂ ಅದು ಸರ್ಕಾರದಿಂದ ಮಾನ್ಯತೆಯಿರುವ ಅಧಿಕೃತ ಗುರುತಿನ ಚೀಟಿಗಳಲ್ಲಿ ಒಂದು.. ಓಟ್ ಮಾಡಲು ವೋಟರ್ ಐಡಿ ಇರಲೇಬೇಕು ಅಂತ ನಿಯಮವೇನೂ ಇಲ್ಲ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು ವೋಟ್ ಮಾಡಬಹುದು.. ಹೀಗಿದ್ದರೂ ಕೆಲವೊಂದು ಸರ್ಕಾರೀ ಸೌಲಭ್ಯವನ್ನು ಪಡೆದುಕೊಳ್ಳಲು ವೋಟರ್ ಐಡಿಯನ್ನು ಕೇಳುತ್ತಾರೆ. ಇಂತಹ ವೋಟರ್ ಐಡಿ ಒಂದು ವೇಳೆ ಕಳೆದು ಹೋದರೆ ಏನು ಮಾಡುವುದು?

 

 

ಕಳೆದ ಹೋದ ಮತದಾರ ಗುರುತಿನ ಚೀಟಿಯ ನಕಲು ಪ್ರತಿಯನ್ನು ಪುನಃ ಪಡೆದುಕೊಳ್ಳಬೇಕಂದ್ರೆ ಅದು ಕಳೆದುಹೋಗಿರುವುದರ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿರುವುದರ ಪ್ರತಿಯನ್ನು ದಾಖಲೆಯಾಗಿ ಕೊಡಬೇಕು. ಹಾಗಾಗಿ ಗುರುತಿನ ಚೀಟಿ ಕಳೆದುಕೊಂಡ ಸ್ಥಳಕ್ಕೆ ಹತ್ತಿರವಿರುವ ಪೊಲೀಸ್ ಸ್ಟೇಷನ್’ಗೆ ಕೂಡಲೇ ಹೋಗಿ ದೂರು ದಾಖಲಿಸಿ, ಎಫ್ಐಆರ್ ಪ್ರತಿ ಪಡೆದುಕೊಳ್ಳಿ.

 

ನಂತರ ಕರ್ನಾಟಕ ಚುನಾವಣಾ ಆಯೋಗದ ನಿಮ್ಮ ಸ್ಥಳೀಯ ಕಚೇರಿಗೆ ತೆರಳಿ ಕ್ಷೇತ್ರವಾರು ಚುನಾವಣಾಧಿಕಾರಿಯನ್ನು ಸಂಪರ್ಕಿಸಿ. ಅಧಿಕಾರಿಗೆ ವೋಟರ್ ಐಡಿ ಕಳೆದುಹೋಗಿರುವುದರ ಬಗ್ಗೆ ಪೊಲೀಸ್ ಸ್ಟೇಷನ್ ನಲ್ಲಿ ಪಡೆದ FIR ಪ್ರತಿಯನ್ನು ನೀಡಿ., ಅಲ್ಲಿ ಸಿಗುವ 002 ಅರ್ಜಿಯನ್ನು ಭರ್ತಿ ಮಾಡಿ.. ಅರ್ಜಿಯ ಪರಿಶೀಲನೆ ಮತ್ತು ವಿಳಾಸ ದಾಖಲಾತಿಗಾಗಿ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಆಧಾರ್ ಅಥವಾ ಪಾಸ್’ಪೋರ್ಟ್ ಇತ್ಯಾದಿ ಅಧಿಕೃತ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಯನ್ನು ನೀಡಿ..ಈ ಪ್ರಕ್ರಿಯೆಗೆ ಶುಲ್ಕ 25 ರೂ ವಿಧಿಸಲಾಗುತ್ತದೆ. ದಾಖಲೆ ಪರಿಶೀಲನೆ ನಂತರ ಹೊಸ ಕಾರ್ಡ್ ಪಡೆಯಬಹುದು..

002 ಅರ್ಜಿಯ ಪ್ರತಿ ಈ ಕೆಳಗಿನಂತಿರುತ್ತದೆ.. ಬೇಕಿದ್ದವರು ಡೌನ್ ಲೋಡ್ ಮಾಡಿಕೊಳ್ಳಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top