fbpx
ಸಮಾಚಾರ

ಕೀಳುಮಟ್ಟದ ಟ್ರೋಲ್: ರೊಚ್ಚಿಗೆದ್ದ ರಶ್ಮಿಕಾ ಕೊಟ್ಟ ಖಡಕ್ ಉತ್ತರ

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಇದೀಗ ಕಿರಿಕ್ ಹುಡುಗಿ ರಶ್ಮಿಕಾ ಮಾದಣ್ಣ ಕೂಡಾ ಇಂಥಾದ್ದೇ ಕಿರಿಕಿರಿಗೀಡಾಗಿದ್ದಾರೇ.

 

 

 

ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕ ಪುಟ್ಟ ವಿಷಯಗಳಿಗೂ ರಶ್ಮಿಕಾರನ್ನು ಟ್ರಾಲ್​ ಮಾಡಲಾಗುತ್ತಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ ರಶ್ಮಿಕಾ ಈಗ ಸಹನೆ ಕಳೆದುಕೊಂಡಿದ್ದಾರೆ. ಅದಕ್ಕೆ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ. ತಮ್ಮ ಬಾಲ್ಯದ ಫೋಟೋಗೆ ಅಸಭ್ಯ ಪದಗಳನ್ನು ಬಳಸಿದವರ ವಿರುದ್ಧ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ನೆಟ್ಟಿಗರು ರಶ್ಮಿಕಾ ಅವರ ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗಾಗಿ ರಶ್ಮಿಕಾ ಟ್ರೋಲ್ ಮಾಡಿದವರಿಗೆ ಖಡಕ್ಕಾಗಿಯೇ ಉತ್ತರಿಸಿದ್ದಾರೆ. ರಶ್ಮಿಕಾ ಅವರ ಬಾಲ್ಯದ ಫೋಟೋ ಮೇಲೆ ಟ್ರೋಲಾಯ ನಮಃ ಎಂಬ ಲೋಗೋ ಇದೆ. ಅಲ್ಲದೆ ಆ ಫೋಟೋವನ್ನು ಟ್ರೋಲ್ ಮಾಡಿ, ಅಸಭ್ಯ ಪದವನ್ನು ಬಳಕೆ ಮಾಡಿದ್ದಾರೆ. ಕಿಡಿಗೇಡಿಗಳ ಈ ರೀತಿಯ ವರ್ತನೆಯಿಂದ ರಶ್ಮಿಕಾ ಮಂದಣ್ಣ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

”ಕಲಾವಿದರಿಗೆ ಹೀಗೆ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ ತಿಳಿಯುತ್ತಿಲ್ಲ. ನಮ್ಮನ್ನು ಸುಲಭವಾಗಿ ಟಾರ್ಗೆಟ್ ಮಾಡಬಹುದು ಅಂತಲೋ. ಸಾರ್ವಜನಿಕ ವ್ಯಕ್ತಿಯಾದ ಕಾರಣ ನೀವು ನಮ್ಮನ್ನು ನಿರ್ದಯವಾಗಿ ಟಾರ್ಗೆಟ್ ಮಾಡಬಹುದೇ. ಅನೇಕರು ಇಂತಹ ಕೆಟ್ಟ ಕಾಮೆಂಟ್ಸ್ ಗಳನ್ನು ನಿರ್ಲಕ್ಷಿಸಿ ಎಂದು ಹೇಳುತ್ತಿದ್ದೀರಿ. ನಾನು ಕೂಡ ಇಷ್ಟು ದಿನ ಅದನ್ನೇ ಮಾಡುತ್ತಾ ಬಂದಿದ್ದೇನೆ.”

ಅಲ್ಲದೆ ನಮ್ಮ ಕೆಲಸದ ಬಗ್ಗೆ ಏನಾದರೂ ಹೇಳಬೇಕು ಎನ್ನಿಸಿದರೆ ಹೇಳಿ. ಏಕೆಂದರೆ ನಿಮಗೆ ಹೇಳಲು ಹಕ್ಕಿದೆ. ಆದರೆ ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಪ್ರತಿ ವೃತ್ತಿಗೂ ಒಂದು ಗೌರವ ಇದೆ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ.

ಇದೇನೇ ಇರಲಿ ಟ್ರಾಲ್ ಮಾಡೋದು ಅವರವರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಅಂಥವರೀಗ ರಶ್ಮಿಕಾ ರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದು ಜನರಿಗೆ ಆಕೆಯ ಮೇಲೆ ಅದೆಷ್ಟು ಗಮನವಿದೆ ಎಂಬುದರ ಸಂಕೇತ. ಇಂಥಾದ್ದಕ್ಕೆಲ್ಲ ರಶ್ಮಿಕಾ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಅವರ ಅಭಿಮಾನಿಗಳು ವಾದಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top