fbpx
ಸಮಾಚಾರ

ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಖ್ಯಾತ ನಟ

‘ರಾಧಾ ಕಲ್ಯಾಣ’ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ಪೃಥ್ವಿ ಅಂಬಾರ್ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೃಥ್ವಿ ತಮ್ಮ ಬಹುದಿನಗಳ ಗೆಳತೀ ಪಾರುಲ್‌ ಶುಕ್ಲಾ ಅವರ ಜೊತೆ ಮದುವೆ ಮಾಡಿಕೊಂಡಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪಾರುಲ್‌ ಎದುರಾಳಿ ತಂಡದವರಾಗಿದ್ದು, ಪೃಥ್ವಿ ಆ ರಿಯಾಲಿಟಿ ಶೋ ಗೆದಿದ್ದರು. ಆವಾಗಲೇ ಪಾರೂಲ್ ಪೃಥ್ವಿ ಪರೂಲ್ ನಡುವೆ ಪ್ರೀತಿ ಚಿಗುರಿತ್ತು. ಹತ್ತು ವರ್ಷಗಳಿಂದ ಶುರುವಾದ ಪ್ರೀತಿ ಕೆಲ ವರ್ಷಗಳಿಂದ ಫೋನ್‌ನಲ್ಲೇ ನಡೆಯುತ್ತಿತ್ತಂತೆ. ನಂತರ ಮನೆಯವರಿಗೆ ತಮ್ಮ ಪ್ರೀತಿ ವಿಷಯ ತಿಳಿಸಿ ಎರಡೂ ಕುಟುಂಬಗಳ ಒಪ್ಪಿಗೆ ಪಡೆದಿಯೇ ಮದುವೆ ಮಾಡಿಕೊಂಡಿದ್ದಾರೆ.

ವರ್ಷಗಳ ಹಿಂದೆ ‘ರಾಧಾ ಕಲ್ಯಾಣ’ ಧಾರಾವಾಹಿಯ ನಾಯಕನಾಗಿ ಜನಮನ ಗೆದ್ದ ನಾಗರಾಜ್ ಅಂಬಾರ್, ಸಿನಿಮಾರಂಗ ಪ್ರವೇಶಿಸುವಾಗ ತಮ್ಮ ಹೆಸರನ್ನು ಪೃಥ್ವಿ ಅಂಬಾರ್ ಎಂದು ಬದಲಾಯಿಸಿದರು. ಒಬ್ಬ ಉತ್ತಮ ನೃತ್ಯಗಾರನಾಗಿ, ಮಧುರ ಕಂಠದ ನಿರೂಪಕನಾಗಿ, ಸಹಜ ಅಭಿನಯದ ಕಲಾವಿದನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಇವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top