fbpx
ಸಮಾಚಾರ

ಅಪಘಾತದಲ್ಲಿ ಸಾವನ್ನಪ್ಪಿದ ಅಭಿಮಾನಿ ಸಹೋದರಿಯರ ಮದ್ವೆ ಖರ್ಚು ವಹಿಸಿಕೊಂಡ ದರ್ಶನ್

ಅಭಿಮಾನಿಗಳಿಗೆ ಚಾಲೆಂಜಿಂಗ್ ದರ್ಶನ್ ಅಂದರೆ ಪ್ರಾಣ. ಅದೇ ರೀತಿ ಅಭಿಮಾನಿಗಳ ಮೇಲೂ ದರ್ಶನ್ ಅವರಿಗೆ ಅಪಾರ ಪ್ರೀತಿ ಕಾಳಜಿಗಳಿವೆ. ಅವರದನ್ನು ತೋರಿಸಿಕೊಳ್ಳುವುದು ಕೆಲ ಸಂದರ್ಭಗಳಲ್ಲಿ ಮಾತ್ರ. ಗದರಿಕೆಯ ಮೂಲಕವೇ ಪ್ರೀತಿ ಸೂಸುವ ವಿಶಿಷ್ಟ ವ್ಯಕ್ತಿತ್ವದ ದರ್ಶನ್ ಅವರು ತಮ್ಮ ಅಭಿಮಾನಿಗಳ ಕಷ್ಟಕ್ಕೆ ಕಣ್ಣೀರಾದ, ಅದೆಷ್ಟೇ ಬ್ಯುಸಿಯಾಗಿದ್ದರೂ ಸಹಾಯಕ್ಕೆ ಧಾವಿಸಿದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಭಿಮಾನಿಯೊಬ್ಬನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆ ಮೆರೆದಿದ್ದಾರೆ.

ಹಿಂದಿನ ವರ್ಷ ದರ್ಶನ್ ಮಗನ ಹುಟ್ಟುಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ಮನೆಗೆ ಆಗಮಿಸುತ್ತಿದ್ದ ವೇಳೆ ಅಪಘಾತದಲ್ಲಿ ರಾಕೇಶ್ ಎನ್ನುವವರು ಸಾವನ್ನಪ್ಪಿದ್ದರು, ಇದರಿಂದ ದಾಸನಿಗೆ ತುಂಬ ಬೇಸರವಾಗಿತ್ತು. ರಾಕೇಶ್ ಕುಟುಂಬಕ್ಕೆ ದರ್ಶನ್ 2 ಲಕ್ಷ ರೂಪಾಯಿ ಹಣಸಹಾಯ ಮಾಡಿದ್ದರು. ಈಗ ಆ ಮನೆಯ ಕುಟುಂಬಕ್ಕೆ ದರ್ಶನ್ ಮತ್ತೊಮ್ಮೆ ಆಸರೆಯಾಗಿದೆ.

ಈ ಬಾರಿಯ ಹುಟ್ಟುಹಬ್ಬಕ್ಕೆ ರಾಕೇಶ್ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದ ದರ್ಶನ್, ಅವರ ಮನೆ ಮಗನಾಗಿದ್ದಾರೆ. ರಾಕೇಶ್ ಅಪ್ಪ ನರಸಿಂಹಯ್ಯ, ತಾಯಿ ಗಂಗಮ್ಮರನ್ನು ಕರೆಸಿಕೊಂಡ ದರ್ಶನ್ ರಾಕೇಶ್ ಅವರ ಮೂವರು ಸೋದರಿಯ ಮದುವೆಯ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಾಕೇಶ್ ಅವರಿಗೆ ಕೀರ್ತನಾ, ನಾಗವೇಣಿ ಎಂಬ ಸೋದರಿಯರಿದ್ದು, ಅವರ ಮದುವೆ ಖರ್ಚಿಗೆ ಏನೇ ಖರ್ಚಿದ್ದರೂ ನನ್ನನ್ನು ಬಂದು ಕೇಳಿ, ನಾನು ಸಹಾಯ ಮಾಡ್ತೀನಿ ಅಂತ ದರ್ಶನ್ ಭರವಸೆ ನೀಡಿದ್ದಾರೆ.

ನಡೆದ ಘಟನೆ ಏನು?
ರಾಕೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟ್ಟಾ ಅಭಿಯಾನಿಯಾಗಿದ್ದರು. ಹೀಗಾಗಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಬೈಕ್‍ನಲ್ಲಿ ದರ್ಶನ್ ಪುತ್ರ ವಿನೀಶ್‍ಗೆ ಜನ್ಮದಿನದ ಶುಭಕೋರಲು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದರು. ಕಾರ್ತಿಕ್ ಬೈಕ್ ಚಲಾಯಿಸುತ್ತಿದ್ದರೆ ರಾಕೇಶ್ ಹಿಂಬದಿಯಲ್ಲಿ ಕುಳಿತಿದ್ದ. ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ಬೈಕ್ ಬರುತ್ತಿದ್ದಂತೆ, ಕಾರ್ತಿಕ್ ತಳ್ಳೋಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ರಾಕೇಶ್ ಬೈಕ್‍ನಿಂದ ಎಗರಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top