fbpx
ಸಮಾಚಾರ

“ಅಯೋಧ್ಯೆ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು” ಶಿವಸೇನೆ

ಸುಪ್ರೀಂ ಕೋರ್ಟ್‌ನ ಬಹು ನಿರೀಕ್ಷಿತ ಅಯೋಧ್ಯೆ ತೀರ್ಪಿನ ಲಾಭವನ್ನು ಕೇಂದ್ರ ಸರ್ಕಾರ ಪಡೆಯುವಂತಿಲ್ಲ ಎಂದು ಶಿವಸೇನೆ ಹೇಳಿದೆ. ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಜಮೀನು ವಿವಾದ ಕುರಿತ ದಶಕಗಳ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ವಿವಾದಿತ ಜಾಗ ರಾಮಮಂದಿರ ನಿರ್ಮಾಣಕ್ಕೆ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ ಜಮೀನು ನೀಡುವಂತೆ ಹೇಳಿದೆ.

ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಉದ್ಧವ್ ಠಾಕ್ರೆ ಅವರ ಈ ಹೇಳಿಕೆ ಮಹತ್ವ ಪಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸುವಂತೆ ಹಲವು ವರ್ಷಗಳಿಂದಲೂ ಶಿವಸೇನೆ ಆಗ್ರಹಿಸುತ್ತಲೇ ಇತ್ತು. ಆದರೂ ಮೋದಿ ಸರ್ಕಾರ ಅಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಹೀಗಾಗಿ ಮೋದಿ ಸರ್ಕಾರ ವಿವಾದ ಸಂಬಂಧದ ತೀರ್ಪಿನ ಲಾಭವನ್ನು ಪಡೆಯಬಾರದು ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top