fbpx
ಸಮಾಚಾರ

“ನಾವು ತಿನ್ನುವ ಅನ್ನ ಯಾರು ಬೆಳೆದಿದ್ದಾನೋ ಗೊತ್ತಿಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಂತೆ ಬಾಳಲಿ” ವೀರೇಂದ್ರ ಹೆಗ್ಗಡೆ!

ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ರಾಮನ ದೇವಾಲಯದ ಬಗ್ಗೆ ಐವರು ನ್ಯಾಯಾಧೀಶರು ಸರ್ವಾನುಮತದ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿ ರಾಮನ ದೇವಾಲಯ ನಿರ್ಮಿಸಲು ಹಸಿರು ನಿಶಾನೆ ತೋರಿದ್ದಾರೆ. ಇದೇ ವೇಳೆ ಅಯೋಧ್ಯೆಯಲ್ಲಿಯೇ ಮುಸ್ಲಿಮರಿಗೆ ಬೇರೆಡೆ 5 ಎಕರೆ ಭೂಮಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ದೇಶಾದ್ಯಂತ ಜನ ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಐತಿಹಾಸಿಕ ತೀರ್ಪು ಹೊರಬಿದ್ದಿರುವ ಹೊತ್ತಿನಲ್ಲೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿದೆ. ನಾವು ತಿನ್ನೋ ಅನ್ನ ಯಾರು ಬೆಳೆದಿದ್ದೆನ್ನುವುದು ನಮಗೆ ತಿಳಿದಿರಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಿನಂತೆ ಬೆರೆತು ಬಾಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಡನೆ ಮಾತನ್ನಾಡಿದ ಹೆಗ್ಗಡೆ ಸುಪ್ರೀಂ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ತೀರ್ಪಿನಿಂದ ಜನಸಾಮಾನ್ಯರು ಉದ್ವಿಗ್ನರಾಗದೆ ಸಾಮರಸ್ಯದಿಂದ ಬದುಕಬೇಕು. ಹಿಂದೂ-ಮುಸ್ಲಿಮರು ಯಾವ ಭಿನ್ನಾಭಿಪ್ರಾಯವಿಲ್ಲದೆ ತಮ್ಮ ತಮ್ಮ ಕರ್ತವ್ಯಗಳನ್ನ ಮುಂದುವರಿಸಿಕೊಂಡು ಹೋಗಬೇಕು ಎಂದಿದ್ದಾರೆ.

ನಾವು ತಿನ್ನುವ ಅನ್ನ ಯಾರು ಬೆಳೆದಿದ್ದಾನೋ ಗೊತ್ತಿಲ್ಲ:
” ನಾವು ತಿನ್ನುವ ಅನ್ನ ಯಾರು ಬೆಳೆದಿದ್ದಾನೆಯೋ ಗೊತ್ತಿಲ್ಲ. ನಾವು ಸೇವಿಸುವ ತರಕಾರಿಯನ್ನು ಹಿಂದೂ ಬೆಳೆದಿದ್ದಾನಾ, ಮುಸಲ್ಮಾನ ಅಥವಾ ಕ್ರೈಸ್ತ ಬೆಳೆದಿದ್ದಾನೆಯೋ ಗೊತ್ತಿಲ್ಲ. ಅದೇ ರೀತಿ ಹಾಲು-ನೀರು ಬೆರೆತಂತೆ ಸಮಾಜ ಇರಬೇಕು. ತೀರ್ಪಿನಿಂದ ಯಾರೂ ಚಂಚಲ ಆಗಬಾರದು. ತೀರ್ಪಿನ ನಂತರ ಸಾಮರಸ್ಯದಿಂದ ಬದುಕಬೇಕು. ಈ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳೋಣ ಎಂದು ಹೆಗ್ಗಡೆಯವರು ರಾಷ್ಟ್ರದ ಜನತೆಯಲ್ಲಿ ಮನವಿ ಮಾಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top