fbpx
ಸಮಾಚಾರ

ರಾಮನಿಗೆ ಅಯೋಧ್ಯೆ :ಮಂದಿರ ನಿರ್ಮಾಣಕ್ಕೆ ‘ಸುಪ್ರೀಂ’ ವಿಧಿಸಿದ ಷರತ್ತುಗಳೇನು?

ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ರಾಮನ ದೇವಾಲಯದ ಬಗ್ಗೆ ಐವರು ನ್ಯಾಯಾಧೀಶರು ಸರ್ವಾನುಮತದ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿ ರಾಮನ ದೇವಾಲಯ ನಿರ್ಮಿಸಲು ಹಸಿರು ನಿಶಾನೆ ತೋರಿದ್ದಾರೆ. ಇದೇ ವೇಳೆ ಅಯೋಧ್ಯೆಯಲ್ಲಿಯೇ ಮುಸ್ಲಿಮರಿಗೆ ಬೇರೆಡೆ 5 ಎಕರೆ ಭೂಮಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸುಪ್ರೀಂಕೋರ್ಟ್​​ ವಿವಾದಿತ ಅಯೋಧ್ಯೆ ಜಾಗವನ್ನು ರಾಮಲಲ್ಲಾಗೆ ನೀಡಿದೆ. ಆದರೆ, ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ.

ವಿವಾದಿತ ಜಾಗವನ್ನು ಕೇಂದ್ರಸರ್ಕಾರಕ್ಕೆ ಒಪ್ಪಿಸಬೇಕು. ಕೇಂದ್ರ ಸರ್ಕಾರ ಮೂರು ತಿಂಗಳ ಒಳಗೆ ಟ್ರಸ್ಟ್ ರಚಿಸಬೇಕು. ನಂತರ ಈ ಜಾಗ ಟ್ರಸ್ಟ್​ಗೆ ಹಸ್ತಾಂತರವಾಗಲಿದೆ. ಟ್ರಸ್ಟ್ ಮೇಲುಸ್ತುವಾರಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ಇದರಲ್ಲಿ ಬೇರೆ ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಕೋರ್ಟ್​ ಹೇಳಿದೆ.

ಜಾಗದ ಹಕ್ಕುದಾರಿಕೆಗೆ ಅರ್ಜಿ ಹಾಕಿದ್ದ ಸುನ್ನಿ ಬೋರ್ಡ್​​ಗೆ 5 ಎಕರೆ ಪರ್ಯಾಯ ಜಾಗ ನೀಡಲಾಗುತ್ತಿದೆ. ಇಲ್ಲಿ ಮಸೀದಿ ನಿರ್ಮಾಣ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಸುನ್ನಿ ಬೋರ್ಡ್ ವಿವೇಚನೆಗೆ ಬಿಟ್ಟಿದ್ದು. ಪರ್ಯಾಯ ಜಾಗವನ್ನು ಇತರೆ ಅವಶ್ಯಕತೆಗೂ ಬಳಸಬಹುದು ಎಂದು ಕೋರ್ಟ್​​ ಆದೇಶದಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top