fbpx
ಸಮಾಚಾರ

ಬೆಲ್ ಬಾಟಂ ಹಿಂದಿ ರಿಮೇಕ್​ನಲ್ಲಿ ನಟಿಸಲಿರುವ ಅಕ್ಷಯ್ ಕುಮಾರ್?

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಂ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಜೊತೆಗೆ ಈ ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಮೇಕ್ ಹಕ್ಕು ಮಾರಾಟ ಆಗಿತ್ತು. ಇದೀಗ ಹಿಂದಿ ಭಾಷೆಯ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಿವುಡ್​ನ ಕೆಲ ಮೂಲಗಳ ಪ್ರಕಾರ ಈ ಸುದ್ದಿ ನಿಜ ಎನ್ನಲಾಗುತ್ತಿದೆ. ಈ ಹಿಂದೆ ‘ಲಖನೌ ಸೆಂಟ್ರಲ್’ ಚಿತ್ರ ನಿರ್ಮಾಣ ಮಾಡಿದ್ದ ನಿರ್ದೇಶಕ ಮತ್ತು ನಿರ್ವಪಕ ಇಬ್ಬರು ಸೇರಿ ಕನ್ನಡದ ‘ಬೆಲ್​ಬಾಟಂ’ ಚಿತ್ರವನ್ನು ಹಿಂದಿಯಲ್ಲಿ ಸೃಷ್ಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ‘ಲಖನೌ ಸೆಂಟ್ರಲ್’ ಚಿತ್ರಕ್ಕೆ ನಿಖಿಲ್ ಅಡ್ವಾನಿ ಬಂಡವಾಳ ಹೂಡಿದ್ದರು. ರಂಜಿತ್ ತಿವಾರಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಈಗ ಈ ಜೋಡಿ ‘ಬೆಲ್​ಬಾಟಂ’ ಕೈಗೆತ್ತಿಕೊಂಡಿದ್ದು, ಅಕ್ಷಯ್ಗೂ ಸಿನಿಮಾ ಇಷ್ಟವಾಗಿದೆ ಎಂಬುದು ಮೂಲಗಳ ಮಾಹಿತಿ. ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿರುವ ನಿಖಿಲ್ ಅಡ್ವಾನಿ, ಹಿಂದಿ ಸಿನಿಮಾದ ಚಿತ್ರಕಥೆ ಕೆಲಸಕ್ಕೂ ಚಾಲನೆ ನೀಡಿದ್ದಾರಂತೆ.

ಇದೇ ವರ್ಷಾಂತ್ಯಕ್ಕೆ ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡು, 2020ರ ಆರಂಭದಲ್ಲಿ ಶೂಟಿಂಗ್​ಗೆ ಚಾಲನೆ ನೀಡುತ್ತಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಕೆಲವು ಟೈಟಲ್ ಗಳು ಚಾಲ್ತಿಯಲ್ಲಿ ಇದ್ದೂ, ಯಾವುದು ಸೂಟ್ ಆಗದೆ ಇದ್ದರೆ, ‘ಬೆಲ್ ಬಾಟಂ’ ಹೆಸರೇ ಚಿತ್ರಕ್ಕೆ ನಿಗದಿ ಆಗಲಿದೆ.

ಈ ಬಗ್ಗೆ ಮಾತನಾಡಿದ ‘ಬೆಲ್ ಬಾಟಂ’ ಸಿನಿಮಾ ನಿರ್ದೇಶಕ ಜಯತೀರ್ಥ, “ಸಿನಿಮಾದ ರಿಮೇಕ್ ಹಕ್ಕುಗಳು ಹಿಂದಿಗೆ ಮಾರಾಟ ಆಗಿದೆ. ಆದರೆ ಅಕ್ಷಯ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ರಿಮೇಕ್ ಖರೀದಿ ಮಾಡಿದ ಸಂಸ್ಥೆ ಕಡೆಯಿಂದ ಯಾವುದೇ ಸುದ್ದಿ ಬಂದಿಲ್ಲ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top