fbpx
ಸಮಾಚಾರ

“ಡೆಂಘೀ, ಮಲೇರಿಯಾ ಉಲ್ಬಣಕ್ಕೆ ಕಾಂಗ್ರೆಸ್ ಕಾರಣ” ಬಿಜೆಪಿ ಶಾಸಕ!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗಿನ ಸರಕಾರದ ನಿಯಮಗಳೇ ಮಲೇರಿಯಾ, ಡೆಂಗ್ಯೂ ರೀತಿಯ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಗೊಳ್ಳಲು ಕಾರಣವಾಗಿತ್ತು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಆರೋಪಿಸಿದರು.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಮಲೇರಿಯಾ ಸೆಲ್ ಇದೆ. ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ 60 ಜನ ಸಿಬ್ಬಂದಿ ಮತ್ತು ಸೂಪರ್ ವೈಸರ್ ಆಗಿ ಹತ್ತು ಜನರನ್ನು ನೇಮಿಸಲಾಗಿತ್ತು. ಆದರೆ ಅವರಿಗೆ ನಿಗದಿಪಡಿಸಿದ ಕೆಲಸ ಬಿಟ್ಟು ನೀರಿನ ಬಿಲ್ ಸಂಗ್ರಹಕ್ಕೆ ನಿಯೋಜಿಸಿದ್ದರು. ಇದರಿಂದ ಸಾಂಕ್ರಾಮಿಕ ರೋಗ ಉಲ್ಭಣಿಸಿತು” ಎಂದು ಅವರು ಆರೋಪಿಸಿದ್ದಾರೆ.

ನೂತನ ತುಂಬೆ ವೆಂಟೆಡ್ ಡ್ಯಾಂನಲ್ಲಿ ಏಳು ಮೀಟರ್ ನೀರು ನಿಲ್ಲಿಸಲು ತೆಗೆದುಕೊಳ್ಳಬೇಕಾದ ಕ್ರಮ ಪಾಲಿಸಲು ಪಾಲಿಕೆ ಮತ್ತು ಹಿಂದಿನ ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿತ್ತು. ಬಿಜೆಪಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ತಕ್ಷಣ ತಾನು ಮತ್ತು ವೇದವ್ಯಾಸ ಕಾಮತ್ ಸಿಎಂ ಭೇಟಿಯಾಗಿ ನಮ್ಮ ಕ್ಷೇತ್ರದ ನೀರಿನ ಸಮಸ್ಯೆ ವಿವರಿಸಿದ್ದೇವೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top