fbpx
ಸಮಾಚಾರ

ಮ್ಯೂಸಿಯಂನಲ್ಲಿ ಅಭಿನಂದನ್ ಪ್ರತಿಕೃತಿ ಇಟ್ಟು ವಿಕೃತಿ ಮೆರೆದ ಪಾಕಿಸ್ತಾನ!

ಭಾರತದ ವಿರುದ್ಧ ಸದಾ ವಿಷಕಾರುತ್ತಲೇ ಇರುವ ಪಾಕಿಸ್ತಾನ ಮತ್ತೊಮ್ಮೆ ವಿಕೃತಿ ಮೆರೆದಿದೆ. ಬಾಲಾಕೋಟ್ ದಾಳಿ ವೇಳೆ ವಿಮಾನ ಪತನಗೊಂಡ ಬಳಿಕ ಪಾಕ್ ಸೈನಿಕರ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‌ರ ಪ್ರತಿಕೃತಿಯನ್ನು ಪಾಕಿಸ್ತಾನ ರಚಿಸಿ ಕರಾಚಿಯಲ್ಲಿನ ಯುದ್ಧ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ.

 

 

ಇದರ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿರುವ ಪಾಕಿಸ್ತಾನ ಪತ್ರಕರ್ತ ಅನ್ವರ್‌ ಲೋಧಿ ” ಪಾಕ್‌ ವಾಯುಪಡೆ ಅಭಿನಂದನ್‌ ಅವರ ಪ್ರತಿಕೃತಿ ಇರಿಸಿದೆ. ಆದರೆ ಕೈಯಲ್ಲಿ ಚಹಾ ಕಪ್‌ ಕೊಟ್ಟಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು,” ಎಂದು ಗೇಲಿ ಮಾಡಿದ್ದಾರೆ.

ಲೂಧಿ ಶೇರ್​ ಮಾಡಿರುವ ಫೋಟೋದಲ್ಲಿ ಪಾಕ್​ ಯೋಧನ ಆಕೃತಿಯು ವರ್ಧಮಾನ್​ ಆಕೃತಿಯ ಎಡಗೈ ಅನ್ನು ಹಿಂದಕ್ಕೆ ನುಲಿದು ಹಿಡಿದುಕೊಂಡಿರುವಂತೆ ಕಾಣುತ್ತಿದೆ. ಅಭಿನಂದನ್ ಪಕ್ಕದಲ್ಲಿ ಟೀ ಗ್ಲಾಸ್ ಇಡಲಾಗಿದೆ. ಜೊತೆಗೆ ಅಭಿನಂದನ್ ಅವರ ಹಿಂದೆ, ಸೆರೆ ಸಿಕ್ಕಾಗ ಪಾಕ್ ವಶಪಡಿಸಿಕೊಂ ಡಿದ್ದ ವರ್ತಮಾನ್ ಅವರ ಸಮವಸ್ತ್ರವನ್ನು ನೇತು ಹಾಕಲಾಗಿದೆ. ಇದು ಅಗೌರವ ತೋರಿದಂತಿದ್ದು ಸಾಕಷ್ಟು ಭಾರತೀಯರು ಪಾಕ್​ ಕ್ರಮವನ್ನು ಖಂಡಿಸಿದ್ದಾರೆ.

ಫೆಬ್ರವರಿಯಲ್ಲಿ ಪಾಕಿಸ್ತಾನದ ವಶಕ್ಕೆ ಸಿಕ್ಕಿದ್ದ ಅಭಿನಂದನ್‌ ಅವರ ವಿಡಿಯೊವೊಂದು ವೈರಲ್‌ ಆಗಿತ್ತು. ಗಾಯಗೊಂಡಿದ್ದ ಅಭಿನಂದನ್‌ ಅವರು ಕೈಯಲ್ಲಿ ಚಹಾ ಕಪ್‌ ಹಿಡಿದುಕೊಂಡಿದ್ದರು. ಭಾರತದ ಬಗ್ಗೆ ಗೌಪ್ಯ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಪಾಕಿಸ್ತಾನ ಅಧಿಕಾರಿಗಳು ಹೇರುತ್ತಿದ್ದ ಒತ್ತಡಕ್ಕೆ ಮಣಿಯದೆ ಅಭಿನಂದನ್‌ ಅವರು , ‘ ನೀವು ಕೊಟ್ಟ ಚಹಾ ಚೆನ್ನಾಗಿದೆ. ಧನ್ಯವಾದ’ ಎನ್ನುತ್ತಿದ್ದರು. ಈ ವಿಡಿಯೋ ಆಗ ತುಂಬಾ ವೈರಲ್ ಆಗಿತ್ತು.’

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top