fbpx
ಸಮಾಚಾರ

ಗೆಳೆಯನೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಗ್ನಿಸಾಕ್ಷಿ’ ನಟಿ!

‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿಯೊಬ್ಬರು ತಮ್ಮ ಗೆಳೆಯನನ್ನು ವರಿಸುವ ಮೂಲಕ ಸಪ್ತಪದಿ ತುಳಿದಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿ ನಟಿ ಇಶಿತಾವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಶಿತಾವರ್ಷ ಎನ್ನುವುದಕ್ಕಿಂತ ಮಾಯಾ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಯಾಕೆಂದರೆ ಈಕೆ ಧಾರಾವಾಹಿಯಲ್ಲಿ ಮಾಯಾ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

“ಅಗ್ನಿಸಾಕ್ಷಿ” ಧಾರಾವಾಹಿಯಲ್ಲಿ ಮಾಯಾ ಪಾತ್ರಧಾರಿಯಾಗಿ ಜನಪ್ರಿಯವಾಗಿರುವ ನಟಿ ಇಶಿತಾವರ್ಷ ಕೊರಿಯೋಗ್ರಾಫರ್ ಆಗಿರುವ ಮುರುಗನಂದನ್ ಅವರೊಡನೆ ವೈವಾಹಿಕ ಜೀವನ ಪ್ರಾರಂಭಿಸಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬ ಸದಸ್ಯರು, ಸ್ನೇಹಿತರು, ಕಿರುತೆರೆ ಕಲಾವಿದರು ಸಹ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ.

ಇಶಿತಾ ಧಾರಾವಾಹಿಯ ಜೊತೆಗೆ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ದೊಡ್ಡ ಪರೆದೆಯಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಇಶಿತಾ ಕೈ ಹಿಡಿದಿರುವ ಮುರುಗಾನಂದ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಶಿತಾ ಕೂಡ ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಮುರುಗಾನಂದ್ ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top