fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಬ್ ಸ್ಮಾಷ್ ಅಲ್ಲೂ ರಘು- ಸುಶ್ಮಿತಾ!

ಡಬ್​ಸ್ಮಾಶ್ ಮಾಡಿ ಟ್ರೊಲ್ ಗೆ ಸದಾ ಒಳಗಾಗುತ್ತಿದ್ದ ಅಲ್ಲು ರಘು ಹಾಗು ಸುಶ್ಮಿತಾರ ಮದುವೆ ಮಾಡಿಕೊಂಡಿದ್ದಾರೆ. ಡಬ್‍ಸ್ಮಾಶ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ಮದುವೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಿ ಶುಭ ಕೋರಿದ್ದಾರೆ.

ಈ ಜೋಡಿ ಕಳೆದ ಗುರುವಾರ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವರ ರಘು, ಧ್ರುವ ಸರ್ಜಾ ಅವರ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟನನ್ನು ಮದುವೆಗೆ ಆಹ್ವಾನಿಸಿದ್ದರು. ಅಭಿಮಾನಿಯ ಆಹ್ವಾನವನ್ನು ಸ್ವೀಕರಿಸಿದ್ದ ಧ್ರುವ ಅವರು ವಿವಾಹ ಕಾರ್ಯಕ್ರಮಕ್ಕೆ ತೆರಳಿ ವಿಶ್ ಮಾಡಿದ್ದಾರೆ. ಧ್ರುವ ಸರ್ಜಾ ಆಗಮನ ಅಲ್ಲು ರಘು ಹಾಗೂ ಸುಷ್ಮಿತಾ ಶೇಷಗಿರಿ ಮುಖದಲ್ಲಿ ನಗು ಮೂಡಿಸಿತು. ಕುಟುಂಬದವರು ಕೂಡ ಖುಷಿಯಾದರು.

ರಘು ಮತ್ತು ಸುಷ್ಮಿತಾ ಸ್ನೇಹಿತರಾಗಿದ್ದರು. ನಂತರ ಡಬ್‍ಸ್ಮಾಶ್ ಮಾಡಲು ಶುರು ಮಾಡಿದರು. ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಈ ಮೂಲಕ ಇವರಿಬ್ಬರಿಗೆ ಫಾಲೋವರ್ಸ್‍ಗಳ ಸಂಖ್ಯೆಗಳ ಕೂಡ ಹೆಚ್ಚಾಯಿತು. ಇದರಿಂದ ಈ ಜೋಡಿ ಖ್ಯಾತಿ ಪಡೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top