fbpx
ಸಮಾಚಾರ

ಈ ಗಾಸಿಪ್ ಬಗ್ಗೆ ಬೇಸರಗೊಂಡ ನಿರೂಪಕಿ ಅನುಶ್ರೀ!

ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಶೀಫ್ರದಲ್ಲೇ ಮದುವೆಯಾಗಲಿದ್ದಾರೆ. ಅವರ ಮನೆಯಲ್ಲಿ ಈಗಾಗಲೇ ಹುಡುಗನನ್ನು ಹುಡುಕಲು ಶುರು ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಸ್ವತಃ ಅನುಶ್ರೀ ಈ ಬಗ್ಗೆ ಮೌನ ಮುರಿದಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರೂಪಕಿ ಅನುಶ್ರೀ ‘ಈಗಾಗಲೇ ಅನೇಕರು ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಾಕ್ಷಣ ಮದುವೆ ಮಾಡುವ ಕಾತುರ ಈ ಜನಕ್ಕೆ ಏಕೆ ಬರುತ್ತೆ ಎಂದು ನನಗೆ ಗೊತ್ತಿಲ್ಲ. ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನಾನು ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಅನುಶ್ರೀ ಹೇಳಿದ್ದಾರೆ.

ಎಲ್ಲರೂ ಒಂದಲ್ಲಾ ಒಂದು ದಿನ ಮದುವೆಯಾಗಿಯೇ ಆಗುತ್ತಾರೆ. ಆದರೆ ನನ್ನ ಮದುವೆ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಅಲ್ಲದೆ ನನ್ನ ಮನೆಯವರು ಕೂಡ ಮದುವೆಯಾಗು ಎಂದು ಒತ್ತಾಯಿಸುತ್ತಿಲ್ಲ. ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಏಕೆ ಇದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದರು.

“ನಾವು ಮದುವೆ ಆಗಬೇಕು ಎಂದುಕೊಂಡಾಗ ಎಲ್ಲರಿಗೂ ತಿಳಿಸುತ್ತೇನೆ. ಯಾವುದನ್ನು ಗುಟ್ಟಾಗಿ ಮಾಡುವುದಿಲ್ಲ. ಹೀಗಾಗಿ ಸುಳ್ಳು ಸುದ್ದಿಯನ್ನು ನಂಬಬೇಡಿ” ಎಂದು ತಮ್ಮ ಮದುವೆ ವಂದತಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top