fbpx
ಸಮಾಚಾರ

ಝೀರೋ ಟ್ರಾಫಿಕ್ ವಿಚಾರದಲ್ಲಿ ಮಾತು ತಪ್ಪಿದ ಡಿಸಿಎಂ ಅಶ್ವತ್ಥ್​ನಾರಾಯಣ್.

ದೋಸ್ತಿ ಸರ್ಕಾರದಲ್ಲಿ ಡಿಸಿಎಂ ಪರಮೇಶ್ವರ್ ಝೀರೋ ಟ್ರಾಫಿಕ್ ಸೌಲಭ್ಯ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಝೀರೋ ಟ್ರಾಫಿಕ್ ಪಡೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತೊಂಗರಿಹಂಕಲ್ ಸರ್ಕಲ್, ಹನುಮಂತಪ್ಪ ವೃತ್ತ. ಮಲ್ಲಂದೂರು ಸರ್ಕಲ್​ನಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಡಿಸಿಎಂ ಅಶ್ವಥ್ ನಾರಾಯಣ್‍ಗಾಗಿ ಪೊಲೀಸರು ಒಂದಲ್ಲ ಎರಡಲ್ಲ ನಾಲ್ಕು ಬಾರೀ ಝಿರೋ ಟ್ರಾಫಿಕ್ ಸೌಲಭ್ಯ ನೀಡಿದ್ದು, ಬಿಸಿಲಿನಲ್ಲಿ ನಿಂತು ಚಿಕ್ಕಮಗಳೂರಿನ ಜನ ಹೈರಾಣಾಗಿ ಹೋಗಿದ್ದಾರೆ.

4 ಬಾರಿ ಜೀರೋ ಟ್ರಾಫಿಕ್ ಅಳವಡಿಸಿದ್ದರಿಂದ ಚಿಕ್ಕಮಗಳೂರಿನ ಜನತೆ ದಿನವಿಡೀ ಹೈರಾಣಾದರು. ಸುಡು ಬಿಸಿಲಿನಲ್ಲೇ ನಿಂತು ಪೊಲೀಸರ ವಿರುದ್ಧ ರೇಗಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಪೊಲೀಸರು ಕೂಡಾ ಮೂಕಪ್ರೇಕ್ಷಕರಂತೆ ನಿಂತು ಬಿಟ್ಟಿದ್ದರು.

ಈ ಹಿಂದೆ ಡಿಸಿಎಂ ಡಾ.ಅಶ್ವಥ್ ನಾರಾಯಣ್​, “ತಮಗೆ ಝೀರೋ ಟ್ರಾಫಿಕ್​ ವ್ಯವಸ್ಥೆ ಬೇಡ, ನಾನು ಜನರ ಮದ್ಯೆಯೇ ಇರುತ್ತೇನೆ” ಎಂದು ಹೇಳಿದ್ದರು. ಆಗ ಅವರ ಹೇಳಿಕೆಗೆ ಬಾರಿ ಪ್ರಶಂಸೆ ಸಿಕ್ಕಿತ್ತು. ಆದರೆ ಇಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್​ ಅವರು ಹೇಳಿದ ಮಾತನ್ನ ತಪ್ಪಿದ್ರಾ? ಎಂಬ ಮಾತುಗಳು ಕೇಳಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top