fbpx
ಸಮಾಚಾರ

ಕಾರ್ಮಿಕ ಮಹಿಳೆಯ ಮಗಳ ಕೈಯಿಂದ ರೈಲ್ವೆ ಎಸ್ಕಲೇಟರ್ ಉದ್ಘಾಟನೆ

ಸರ್ಕಾರಿ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಅಥವಾ ಸೆಲೆಬ್ರಿಟಿಗಳು ಉದ್ಘಾಟಿಸುವುದು ಮಾಮೂಲು. ಆದರೆ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಿರುವ ಎಸ್ಕಲೇಟರ್ ಉದ್ಘಾಟನೆಯನ್ನು ವಿಶೇಷದಲ್ಲಿಯೇ ವಿಶೇಷ ಅತಿಥಿಯೊಬ್ಬರು ಉದ್ಘಾಟಿಸಿದ್ದಾರೆ.

ಆ ವಿಶೇಷ ವ್ಯಕ್ತಿ ಮತ್ಯಾರು ಅಲ್ಲ. ಅದೇ ರೈಲು ನಿಲ್ದಾಣದ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಮಹಿಳೆ ಚಾಂದ್‌ಬೀ ಎಂಬುವವರ 10 ವರ್ಷದ ಮಗಳು ಬೇಗಂ.. ಕಾರ್ಮಿಕ ಮಹಿಳೆಯ ಪುತ್ರಿ ರಿಬ್ಬನ್ ಕತ್ತರಿಸಿ ಎಸ್ಕಲೇಟರ್ ಉದ್ಘಾಟಿಸಿ ಇತಿಹಾಸ ಬರೆದರು. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರಿ ಯೋಜನೆಯನ್ನು ಸಾಮಾನ್ಯ ಜನರು ಉದ್ಘಾಟಿಸಿದ್ದು ಇದೇ ಮೊದಲು.

ನೈಋತ್ಯ ರೈಲ್ವೆಯು ಶನಿವಾರ ಸಂಜೆ ಎಸ್ಕಲೇಟರ್ ಮತ್ತು ಹವಾನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಸದ ಪಿ.ಸಿ.ಮೋಹನ್ ಉದ್ಘಾಟನೇ ಮಾಡಬೇಕಿತ್ತು. ಆದರೆ, ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದರಿಂದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

ಆದರೆ ಉದ್ಘಾಟನೆಗೆ ಸಕಲ ಸಿದ್ಧತೆ ನಡೆಸಿ ಕಾರ್ಯಕ್ರಮ ಮುಂದೂಡುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು, “ರೈಲು ನಿಲ್ದಾಣದ ಕಾಮಗಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಮಗಳು ಬೇಗಂನನ್ನು ಕರೆತಂದು ಎಸ್ಕಲೇಟರ್ ಮತ್ತು ಹವಾ ನಿಯಂತ್ರಿತ ಕೊಠಡಿಯನ್ನು ಉದ್ಘಾಟಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top