fbpx
ಸಮಾಚಾರ

“ಕೊಹ್ಲಿಗೆ ಮುಂದೈತೆ ತಲೆನೋವು” ಹಂಗಾಮಿ ನಾಯಕ ರೋಹಿತ್ ಹೀಗೆ ಹೇಳಿದ್ಯಾಕೆ?

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯನ್ನು ಭರ್ಜರಿಯಾಗಿ ಅಂತ್ಯಗೊಳಿಸಿರುವ ಭಾರತಕ್ಕೆ ಎಲ್ಲಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಬಾಂಗ್ಲಾ ವಿರುದ್ದ ಯುವ ಆಟಗಾರರ ಪ್ರದರ್ಶನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಣಿ ಗೆಲುವಿನ ಬಳಿಕ ರೋಹಿತ್ ಶರ್ಮಾ ನೀಡಿದ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಟೀಂ ಇಂಡಿಯಾ ಆಟಗಾರರ ಪ್ರದರ್ಶನ ವಿರಾಟ್ ಕೊಹ್ಲಿಗೆ ತಲೆನೋವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಯುವ ಆಟಗಾರರು ನಾಮುಂದು- ತಾಮುಂದು ಎಂಬಂತೆ ಪೈಪೋಟಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೇರೀತಿ ಆಟಗಾರರು ಅಬ್ಬರಿಸಿದರೆ ನಾಯಕ ವಿರಾಟ್ ಕೊಹ್ಲಿಗೆ ಹಾಗೂ ಬಿಸಿಸಿಐ ಆಯ್ಕೆ ಸಮಿತಿಗೆ ತಲೆನೋವಾಗುವುದು ಗ್ಯಾರೆಂಟಿ.

ಯುವ ಕ್ರಿಕೆಟಿಗರ ಪ್ರದರ್ಶನದಿಂದ 2020ರ ಟಿ20 ವಿಶ್ವಕಪ್ ಟೂರ್ನಿ ಆಯ್ಕೆ ಸವಾಲಾಗಿ ಪರಿಣಮಿಸಲಿದೆ. ನಾಯಕ ಕೊಹ್ಲಿ ಹಾಗೂ ಆಯ್ಕೆ ಸಮಿಗೆ ತಂಡದ ಆಯ್ಕೆ ತಲೆನೋವಾಗಲಿದೆ ಎಂದಿದ್ದಾರೆ. ಕಾರಣ ಬೌಲಿಂಗ್ ವಿಭಾಗಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಖಾಯಂ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಯುವ ಬೌಲರ್‌ಗಳ ಪ್ರದರ್ಶನದಿಂದ ತಂಡದ ಆಯ್ಕೆ ಕಗ್ಗಂಟಾಗಲಿದೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top