fbpx
ಸಮಾಚಾರ

ನಟನ ಜೊತೆ ಮುಂದಿನ ತಿಂಗಳು ಸಿಹಿಕಹಿ ಚಂದ್ರು ಮಗಳ ಮದುವೆ

ಸ್ಯಾಂಡಲ್‍ವುಡ್‌ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಅಡಿಯಿಡಲು ಸಿದ್ಧವಾಗಿದೆ. ‘ಹಾಗೆ ಸುಮ್ಮನೇ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಮತ್ತು ಸಿಹಿಕಹಿ ಚಂದ್ರು ಮಗಳು ನಟಿ ಹಿತಾ ಚಂದ್ರಶೇಖರ್ ಮದುವೆಯಾಗುತ್ತಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಮದುವೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಮದುವೆ ದಿನಾಂಕದ ಬಗ್ಗೆ ಕುಟುಂಬದವರು ಬಹಿರಂಗಪಡಿಸಿಲ್ಲ.

ಮದುವೆ ಬಗ್ಗೆ ನಟ ಕಿರಣ್ ಮಾತನಾಡಿದ್ದು, “ನಮ್ಮ ಮದುವೆ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯಲಿದೆ. ಸೆಲೆಬ್ರಿಟಿಗಳ ರೀತಿಯಲ್ಲಿ ಫ್ಯಾನ್ಸಿಯಾಗಿ ಇರಲ್ಲ. ಚಿತ್ರೋದ್ಯಮಕ್ಕಾಗಿ ದೊಡ್ಡ ಮಟ್ಟದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿಲ್ಲ. ಬಂಧು ಮಿತ್ರರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗುತ್ತಿದ್ದೇವೆ” ಎಂದಿದ್ದಾರೆ.

‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಕಿರಣ್ ಹಾಗೂ ಹಿತಾ ಒಟ್ಟಿಗೆ ನಟಿಸಿದ್ದು ನಂತರ ‘ಲವ್‌’ನಲ್ಲಿ ಬಿದ್ದಿದ್ದಾರೆ. ಈ ವಿಷಯವನ್ನು ಅವರಿಬ್ಬರ ಸ್ನೇಹಿತೆ ಸೋನು ಗೌಡ “ಒಂಥರಾ ಬಣ್ಣಗಳಲ್ಲಿ ಒಂಥರಾ ಲವ್” ಎಂದು ಬಣ್ಣಿಸಿ ಪೋಸ್ಟ್ ಹಾಕುವ ಮೂಲಕ ಸುಮಾರು ದಿನಗಳ ಹಿಂದೆ ಬಹಿರಂಗ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು, ಈ ಯುವ ಜೋಡಿ ಹಸೆಮಣೆಯೇರುತ್ತಿದ್ದಾರೆ.

ನಟ ಕಿರಣ್ ಹಾಗೂ ಹಿತಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಇಷ್ಟಪಟ್ಟಿದ್ದರು. ಕಿರಣ್ 2008ರಲ್ಲಿ “ಹಾಗೆ ಸುಮ್ಮನೆ” ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸ್ದ್ದು ಹಲವು ಸಿನಿಮಾ, ಕಿರುತೆರೆ ಧಾರಆವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಇನ್ನು ಹಿತಾ ಚಂದ್ರಶೇಖರ್ ಸಹ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಇತ್ತೀಚೆಗೆ ಬಿಡುಗಡೆಯಾದ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ”ಯಲ್ಲಿ ಸಹ ಹಿತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top