fbpx
ಸಮಾಚಾರ

ಗುಪ್ತಾಂಗವನ್ನು ಮುಟ್ಟೋ ಹಾಗಿಲ್ಲ ಎಂದು ಕಿರುಚಿದ ದೀಪಿಕಾ ದಾಸ್!

ಬಿಗ್ ಬಾಸ್ ಕನ್ನಡ 7ನೇ ಸೀಸನ್ ಇಂದಿನ ಒಂದು ತಿಂಗಳು ಪೂರೈಸಿದೆ. ಮೂವತ್ತನೇ ದಿನ ಹಲವಾರು ರೋಚಕ ಸಂಗತಿಗಳು ಮನೆಯಲ್ಲಿ ನಡೆದವು. ಟಾಸ್ಕ್ ವೇಳೆ ಟಾಸ್ ವೇಳೆ ರಣರಂಗವಾಗಿತ್ತು. ಹೌದು ಸ್ಪರ್ಧಿಗಳು ಆಕ್ರೋಶ, ಸಿಟ್ಟು, ಸವಾಲು ಹಾಕಿ ಪಂಥಹ್ವಾನ ನೀಡಲಾಗಿತ್ತು.

ನೆನ್ನೆ ಬಿಗ್ ಬಾಸ್ ಮನೆಯ ಸದ್ಯಸರನ್ನು ಎರಡು ತಂಡಗಳಾಗಿ ವಿಭಜಿಸಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಪ್ರಕಾರ ಎರಡು ತಂಡಗಳು ಹಣ್ಣುಗಳನ್ನು ಸಂಗ್ರಹಿಸುವ ಸವಾಲು ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಕಿತ್ತಳೆ ಹಣ್ಣುಗಳನ್ನು ಮಹಿಳಾ ಸ್ಪರ್ಧಿಗಳು ತಮ್ಮ ಟೀ ಶರ್ಟ್‌ನಲ್ಲಿ ಬಚ್ಚಿಟ್ಟುಕೊಂಡಿದ್ದರು. ಅದನ್ನು ಕಿತ್ತುಕೊಳ್ಳಲು ಹೋದಾಗ ಹಲವಾರು ಮಾತುಗಳು ಪ್ರಿಯಾಂಕಾರ ಬಾಯಿಂದ ಬಂತು.

ಕಡೆಗೆ ದೀಪಿಕಾ ದಾಸ್ ಅವರು ತನ್ನ ಟೀ ಶರ್ಟ್ ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿತ್ತಳೆ ಹಣ್ಣನ್ನು ಕುರಿ ಪ್ರತಾಪ್ ಕಿತ್ತುಕೊಳ್ಳಲು ಬಂದಾಗ, ಗುಪ್ತಾಂಗವನ್ನು ಮುಟ್ಟುವ ಹಾಗಿಲ್ಲ. ನಾವು ಹುಡುಗೀರು ಬಿಚ್ಚಿಕೊಂಡು ನಿಲ್ಲೋಕೆ ಬಂದಿಲ್ಲ ಇಲ್ಲಿ ಎಂದು ಕಿರುಚಿದರು. ಆಗ ಕುರಿ ಪ್ರತಾಪ್ ಆಗಿದ್ದರೆ ಯಾಕೆ ನೀವು ಟೀ ಶರ್ಟ್ ಒಳಗೆ ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಸವಾಲು ಹಾಕಿದ ದೀಪಿಕಾ ದಾಸ್ ನಿಮಗೆ ತಾಕತ್ತು ಇದ್ದರೆ ನನ್ನನ್ನು ಮುಟ್ಟಿ ಎಂದು ಸವಾಲು ಹಾಕಿದರು. ಇಷ್ಟೆಲ್ಲ ಕಸರತ್ತು ನಡೆಸಿದ ಹೊರತಾಗಿಯೂ ದೀಪಿಕಾ ಟೀಂ ಗೆದ್ದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top