fbpx
ಸಮಾಚಾರ

ಸಮಸ್ಯೆಗಳನ್ನು ಆಲಿಸಲು 24/7 ಸಹಾಯವಾಣಿ ಆರಂಭಿಸಿದ ಕಾರ್ಮಿಕ ಇಲಾಖೆ!

ಯಾವುದೇ ಇಲಾಖೆಯಾಗಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕು. ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇರಬೇಕು. ಇದೀಗ ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಕ್ರಮ ಕೈಗೊಂಡಿದ್ದು ಇಲಾಖೆಯ ವಿಚಾರವಾಗಿ ಯಾವುದೇ ಕುಂದು ಕೊರತೆ, ಸಮಸ್ಯೆಗಳು ಏನಾದರೂ ಇದ್ದಲ್ಲಿ ಅವನ್ನು ಸ್ವೀಕರಿಸಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.

 

 

ಕಾರ್ಮಿಕ ಇಲಾಖೆಯ ಸಂಭಂದ ಏನಾದರೂ ಸಲಹೆ, ಸೂಚನೆ ಮತ್ತು ದೂರು ಗಳನ್ನು ಹೇಳಿಕೊಳ್ಳಲು ಇಲಾಖೆಯು ಹೊಸದಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಸದ್ಯ ಪ್ರಾಯೋಗಿಕವಾಗಿ ಪೈಲಟ್ ಆಧಾರದ ಮೇಲೆ 24X7 ಸಹಾಯವಾಣಿಯನ್ನು ತೆರೆಯಲಾಗಿದೆ. 2 ತಿಂಗಳ ಪೈಲಟ್ ಆಧಾರಿತ ಸೇವೆ ಮತ್ತು ಹೆಚ್ಚಿನ ಸುಧಾರಣೆ ನಂತರ ಸದರಿ 24X7 ಸಹಾಯವಾಣಿಯನ್ನು ಉದ್ಘಾಟಿಸಲಾಗುತ್ತದೆ ಎಂದು ಹೇಳಲಾಗಿದೆ.

 

 

ಕಾರ್ಮಿಕ ಇಲಾಖೆಯ ಬಗ್ಗೆ ಏನಾದರೂ ಸಲಹೆ, ಸೂಚನೆ ಮತ್ತು ದೂರುಗಳನ್ನು ಹೇಳಿಕೊಳ್ಳಲು 9777777684ಗೆ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಸಂದೇಶ ಕಳುಹಿಸುವಂತೆ ಹೇಳಲಾಗಿದೆ. ಅಥವಾ labourhelpline.karnataka.govt@gmail.com ಗೆ ಈಮೇಲ್ ಮಾಡಬಹುದು.. ಇಲ್ಲದಿದ್ದರೆ 155214 ಸಂಖ್ಯೆಗೆ ಕರೆ ಮಾಡಿ ನೆರವಾಹಿ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top