fbpx
ಸಮಾಚಾರ

ಡಿಂಪಲ್ ಕ್ವೀನ್ ಮನೆಯಲ್ಲಿ ಮದುವೆ ಸಂಭ್ರಮ: ರಚಿತಾ ಸಹೋದರಿ ನಿತ್ಯ ರಾಮ್ ಮದುವೆ ದಿನಾಂಕ ಬಹಿರಂಗ.

ಇತ್ತೀಚೆಗೆ ಕಿರುತೆರೆ ಮತ್ತು ಬೆಳ್ಳಿತೆರೆ ನಟ-ನಟಿಯರು ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗೆ ನಟ ರಿಷಿ ಇಂದು ತಮ್ಮ ಗೆಳತಿಯನ್ನು ಮದುವೆಯಾಗಿದ್ದಾರೆ. ಇದೆ ತಿಂಗಳು ನಟ ದ್ರುವ ಸರ್ಜಾ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ಕಿರುತೆರೆ ಲೋಕದಲ್ಲಿ ‘ಕುಲವಧು’ ಧಾರಾವಾಹಿ ಖ್ಯಾತಿಯ ದೀಪಿಕಾ ಮತ್ತು ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ಇಶಿತಾವರ್ಷ ಮೊನ್ನೆಮೊನ್ನೆಯಷ್ಟೇ ವಿವಾಹವಾಗಿದ್ದರು. ಇದೀಗ ಇದೇ ಲಿಸ್ಟ್ ಗೆ ಸೇರಲು ಕಿರುತೆರೆ ನಟಿ ನಿತ್ಯ ರಾಮ್ ಸಜ್ಜಾಗಿದ್ದಾರೆ.

ನಿತ್ಯಾರಾಮ್ ದಾಂಪತ್ಯ ಜೀವನಕ್ಕೆ ಕಾಲಿಡೋಕೆ ರೆಡಿಯಾಗ್ತಿದ್ದಾರೆ. ನಿತ್ಯಾ ಮದುವೆ ಇದೇ ಡಿಸೆಂಬರ್ 5 ರಂದು ದೊಡ್ಡ ಉದ್ಯಮಿಯಾಗಿರೋ ಹುಡುಗನೊಂದಿಗೆ ಅದ್ಧೂರಿಯಾಗಿ ನಡೆಯಲಿದೆಯಂತೆ. ನಿತ್ಯಾರನ್ನು ವರಿಸಲಿರುವ ಹುಡುಗ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದು, ಸಹೋದರಿಯ ಮದುವೆ ವಿಚಾರವಾಗಿ ರಚಿತಾ ತುಂಬಾ ಖುಷಿಯಾಗಿದ್ದಾರೆ.

ಸದ್ಯಕ್ಕೆ ನಿತ್ಯ ರಾಮ್ ಮದುವೆ ದಿನಾಂಕ ಮಾತ್ರ ಬಹಿರಂಗವಾಗಿದೆ. ನಿತ್ಯ ರಾಮ್ ಕೈಹಿಡಿಯುತ್ತಿರುವ ಹುಡುಗನ ಹೆಸರು ಏನು ಎಂಬುದು ತಿಳಿದುಬಂದಿಲ್ಲ. ಮದುವೆ ತಯಾರಿಯಲ್ಲಿ ಈಗಾಗಲೇ ರಚಿತಾ ರಾಮ್ ಕುಟುಂಬ ತೊಡಗಿಕೊಂಡಿದೆಯಂತೆ.

ಅಂದಹಾಗೆ ‘ಬೆಂಕಿಯಲ್ಲಿ ಅರಳಿದ ಹೂವು’, ‘ಕರ್ಪೂರದ ಗೊಂಬೆ’, ‘ರಾಜಕುಮಾರಿ’, ‘ಎರಡು ಕನಸು’, ನಂದಿನಿ’ ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದಾರೆ. ಕನ್ನಡದ ‘ಮುದ್ದು ಮನಸು’ ಸಿನಿಮಾದಲ್ಲೂ ನಿತ್ಯ ರಾಮ್ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top