fbpx
ಸಮಾಚಾರ

ರಿಯಾಲಿಟಿ ಶೋನಲ್ಲಿ ಗೆದ್ದ ಸಂಪೂರ್ಣ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿದ ವಿಶೇಷ ಚೇತನ!

ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿ ಇಡೀ ರಾಜ್ಯ ಅಕ್ಷರಶಃ ನಲುಗಿದೆ. ನೆರೆ ಸಂತ್ರಸ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿನತ್ತ ನೋಡುತ್ತಿದ್ದಾರೆ. ಇದೇ ವೇಳೆ, ಕೇರಳ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ಓರ್ವ ವಿಶೇಷ ಚೇತನರೊಬ್ಬರು ರಿಯಾಲಿಟಿ ಶೋ ಒಂದರಲ್ಲಿ ಗೆದ್ದ ಸಂಪೂರ್ಣ ಹಣವನ್ನು ಕೇರಳ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ.. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

 

 

ಅಲತ್ತೂರಿನ ವಿಶೇಷ ಚೇತನ ಕಲಾವಿದ ಪ್ರಣವ್ ಬಾಲಸುಬ್ರಮಣ್ಯನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಪರಿಹಾರ ನಿಧಿಗೆ ದೇಣಿಗೆ ನೀಡಿದರು. ಅಲ್ಲದೆ ಇದೇ ವೇಳೆ ಪ್ರಣವ್ ಕಾಲಿನ ಬೆರಳಿಂದಲೇ ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ವಿಶೇಷ ಚೇತನರಾಗಿದ್ದರೂ ಪ್ರಣವ್ ಬೇರೆಯವರಿಗೆ ಸಹಾಯ ಮಾಡುತ್ತಿರುವ ಗುಣ ಪಿಣರಾಯಿ ಅವರ ಮನಗೆದ್ದಿದೆ. ಹೀಗಾಗಿ ಪ್ರಣವ್ ಜೊತೆಗೆ ತಾವಿರುವ ಫೋಟೋಗಳನ್ನು ಪಿಣರಾಯಿ ಅವರು ಟ್ವೀಟ್ ಮಾಡಿ ಪ್ರಣವ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ.

“ಇಂದು ಬೆಳಗ್ಗೆ ನನಗೆ ಹೃದಯಸ್ಪರ್ಶಿ ಅನುಭವವಾಯಿತು. ಅಲತ್ತೂರಿನ ಚಿತ್ರ ಕಲಾವಿದ ಪ್ರಣವ್​ ಕಚೇರಿಗೆ ಆಗಮಿಸಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ವಿಶೇಷ ಚೇತನರಿಗೆ ಕೇರಳ ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಪ್ರಣವ್​​ ಸಂತೋಷ ವ್ಯಕ್ತಪಡಿಸಿದ್ದಾರೆ,” ಎಂದು ಹೇಳಿದ್ದಾರೆ.

ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್‍ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top