fbpx
ಸಮಾಚಾರ

“ಹೊಸಕೋಟೆಯಲ್ಲಿ ಬಿಜೆಪಿ ಕಟ್ಟಿದ್ದೇ ನಾವು, ಆದರೆ ಇವತ್ತು ನಾವು ಕಟ್ಟಿದ ಮನೆಯಲ್ಲಿ ನಮಗೆ ಜಾಗವಿಲ್ಲ” ಶರತ್ ಬಚ್ಚೇಗೌಡ

ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಅಭಿಯಾನದ ಮೂಲಕ ಭರ್ಜರಿ ರೋಡ್ ಶೋ ಬಳಿಕ ಪಕ್ಷೇತ್ತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವುದರಿಂದ ಬಿಜೆಪಿ ಪರಾಚಿತ ಅಭ್ಯರ್ಥಿ ಶರತ್ ಬಚ್ಚೇಗೌಡ ಪಕ್ಷೇತ್ತರನಾಗಿ ಹೊಸಕೋಟೆಯಿಂದ ಕಣಕ್ಕಿಳಿಯುತ್ತಿದ್ದಾರೆ.

ಅವರು ಈ ಉಪಚುನಾವಣೆ ಸ್ವಾಭಿಮಾನದ ವಿಚಾರವಾಗಿದೆ ಎಂದು ಬಣ್ಣಿಸಿದ್ದಾರೆ. ತಾನು ಯಾವುದೇ ಪ್ರತಿಷ್ಠೆ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿಲ್ಲ. ಈ ಹಿಂದೆ ಇದ್ದ ಶಾಸಕರು ಜನರ ನಂಬಿಕೆ ಉಳಿಸಿಕೊಂಡಿಲ್ಲ. ಅವರನ್ನು ಜನರು ಸೋಲಿಸಿ ಸ್ವಾಭಿಮಾನ ಎತ್ತಿಹಿಡಿಯುತ್ತಾರೆಂದು ಶರತ್ ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ನಮ್ಮ ಕ್ಷೇತ್ರದ ಜನರ ಸ್ವಾಭಿಮಾನದ ವಿಚಾರ. ತಾಲೂಕಿಗೆ ಆದ ದ್ರೋಹಕ್ಕೆ ಜನರು ತೀರ್ಪು ಕೊಡುತ್ತಾರೆ. ತಾಲೂಕಿನ ಮಗ, ಈ ನೆಲದ ಮಣ್ಣಿನ ಮಗನೆಂದು ನನಗೆ ಜನರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.

ಭಾರತೀಯ ಜನತಾಪಾರ್ಟಿಯ ಹೆಸರು ಈ ಕ್ಷೇತ್ರದಲ್ಲಿ ಇರಲಿಲ್ಲ. ಆದರೆ, ಬಚ್ಚೇಗೌಡರ ಅಶೀರ್ವಾದಿಂದ ಇವತ್ತು ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿತ್ತು. ಆದರೆ ಇವತ್ತು ಕೆಲವರ ಕುತಂತ್ರದಿಂದ ನಾವು ಕಟ್ಟಿದ ಮನೆಯಲ್ಲಿ ನಮಗೆ ಜಾಗವಿಲ್ಲ. ಆದರೆ ಕ್ಷೇತ್ರದ ಜನ ನಮ್ಮ ಮೇಲಿಟ್ಟಿರುವ ಪ್ರೀತಿ ಹಾಗೆ ಇದೆ. ಹೀಗಾಗಿ ನಾನು ಸ್ಪರ್ಧಿಸಿದ್ದೇನೆ ಕ್ಷೇತ್ರದ ಜನ ಕೈ ಹಿಡಿಯುವ ನಂಬಿಕೆ ಇದೆ ಎಂದರು.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್​ ವಿರುದ್ಧ ಬಿಜೆಪಿಯಿಂದ ನಿಂತಿದ್ದ ಶರತ್ ಬಚ್ಚೇಗೌಡ ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಕೊನೆಯ ಹಂತದವರೆಗೂ ಶರತ್​ ಬಚ್ಚೇಗೌಡ ಗೆಲ್ಲುತ್ತಾರೆಂದೇ ಭಾವಿಸಲಾಗಿತ್ತು. ಆದರೆ, ಕೊನೆಗೂ ಎಂಟಿಬಿ ನಾಗರಾಜ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top