fbpx
ಸಮಾಚಾರ

ತಮಿಳಿನ ‘ಕೈಥಿ’ ಸಿನಿಮಾ ರಿಮೇಕ್ ನಲ್ಲಿ ನಟಿಸುತ್ತಾರಾ ಶಿವರಾಜ್ ಕುಮಾರ್?

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್. ಹೆಚ್ಚು ಸ್ವಮೇಕ್ ಚಿತ್ರಗಳನ್ನೇ ಮಾಡುತ್ತಿದ್ದ ಶಿವಣ್ಣ ತಾವು ರೀಮೇಕ್ ಚಿತ್ರಗಳನ್ನು ಮಾಡುವುದಿಲ್ಲ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಮಲೆಯಾಳಂನ ಸೂಪರ್ ಹಿಟ್ ‘ಒಪ್ಪಮ್’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಆದ ‘ಕವಚ’ ಸಿನಿಮಾದಲ್ಲಿ ನಟಿಸಿದ್ದರು.

 

 

ಇದೀಗ ಶಿವರಾಜ್ ಕುಮಾರ್ ಅವರು ಮತ್ತೊಂದು ರಿಮೇಕ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸಮಾಚಾರ ಕೇಳಿಬರುತ್ತಿದೆ. ಇತ್ತೀಚಿಗೆ ತೆರೆಕಂಡು ಸೂಪರ್ ಹಿಟ್ ಆಗಿರುವ ತಮಿಳಿನ ಕಾರ್ತಿ ಅಭಿನಯಿಸಿದ್ದ ‘ಕೈದಿ’ಯಲ್ಲಿ ಶಿವಣ್ಣ ನಟಿಸುತ್ತಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಈ ಸಿನಿಮಾಗೆ ದೊಡ್ಡ ಪ್ರೇಕ್ಷಕ ವಲಯದಲ್ಲಿ ಭಾರಿ ಮೆಚ್ಚುಗೆ ಗಳಿಸಿಕೊಂಡಿತ್ತು.

ಶಿವರಾಜ್​ಕುಮಾರ್​ ‘ಕೈದಿ’ ಸಿನಿಮಾ ವೀಕ್ಷಿಸಿದ್ದು, ತುಂಬಾನೇ ಇಷ್ಟಪಟ್ಟಿದ್ದಾರಂತೆ. ಈ ಸಿನಿಮಾ ಕನ್ನಡದಲ್ಲಿ ರಿಮೇಕ್​ ಮಾಡಿ, ಅದರಲ್ಲಿ ನಟಿಸಬೇಕು ಎನ್ನುವ ಆಲೋಚನೆ ಅವರದ್ದು. ಇಂತಹ ಸಿನಿಮಾದಲ್ಲಿ ತಾನು ಅಭಿನಯಿಸಬೇಕು ಎನ್ನುವುದು ಅವರ ಆಸೆಯಾಗಿದೆ. ಆ ಕಥೆಯೂ ಅವರಿಗೆ ಹೋಲಿಕೆ ಆಗುತ್ತದೆ. ಆಗಾಗ ಪ್ರಯೋಗಗಳಿಗೆ ಕೈ ಹಾಕುವ ಶಿವಣ್ಣ ಈ ಸಿನಿಮಾ ಮಾಡುವ ಸಾಧ್ಯತೆ ಇದೆ.

ಅಂದಹಾಗೆ ಕೈದಿ’ ಸಿನಿಮಾ ಒಂದು ಪ್ರಯೋಗಾತ್ಮಕ ಮನರಂಜನಾ ಸಿನಿಮಾ. ಇಡೀ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುತ್ತದೆ. ಸಂಜೆಯಿಂದ ಬೆಳಗಿನವರೆಗೆ ಈ ಚಿತ್ರದ ಕಥೆ ಸಾಗುವುದು ಒಂದು ವಿಶೇಷವಾದರೆ, ಈ ಚಿತ್ರದಲ್ಲಿ ಹೀರೋಯಿನ್​ ಇಲ್ಲ ಎನ್ನುವುದು ಮತ್ತೊಂದು ವಿಶೇಷ. ಒಂದೊಮ್ಮೆ ‘ಕೈದಿ’ ಸಿನಿಮಾ ಕನ್ನಡಕ್ಕೆ ಬಂದರೆ ಭಿನ್ನ ಚಿತ್ರ ಎನಿಸಿಕೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top