fbpx
ಸಮಾಚಾರ

‘ಹರೇ ರಾಮ ಹರೇ ಕೃಷ್ಣ’ ಹೆಸರಿನ ಬಿಕಿನಿ ತೊಟ್ಟ ವಾಣಿ ಕಪೂರ್: ಭುಗಿಲೆದ್ದ ಆಕ್ರೋಶ!

ಬಾಲಿವುಡ್ ನಟಿಮಣಿಯರಿಗೆ ವಿವಾದ ಹುಟ್ಟುಹಾಕೋ ಕಾಯಿಲೆ ಇದೆಯಾ? ಇಂಥದೊಂದು ಪ್ರಶ್ನೆ ನಟಿಯರು ಸರಣಿಯೋಪಾದಿಯಲ್ಲಿ ನಾನಾ ವಿವಾದಗಳನ್ನ ನೋಡಿದರೆ ಮೂಡುವುದು ಸಹಜ. ಕೆಲವೊಮ್ಮೆ ಖಾಲಿ ಕೂತಾದ ಏನಾದರೊಂದು ಯಡವಟ್ಟು ಮಾಡೋ ಮೂಲಕವೋ, ಇದ್ದಕ್ಕಿದ್ದಂತೆ ಬಟ್ಟೆ ಕಳಚೋ ಮೂಲಕವೋ ವಿವಾದ ಮಾಡೋ ಇಂಥವರು ಸದಾ ವಿವಾದಗಳ ಮೂಲಕವೇ ಮೈಲೇಜು ಗಿಟ್ಟಿಸಿಕೊಂಡು ನಟಿಯಾಗಿಯೂ ಗುರುತಿಸಿಕೊಂಡಿರುತ್ತಾರೇ.. ಇಂತಹ ವಿವಾದಗಳನ್ನು ಹುಟ್ಟುಹಾಕುವುವುದರಲ್ಲಿ ಬಾಲಿವುಡ್ ನಟಿ ವಾಣಿ ಕಪೂರ್ ಏನು ಕಡಿಮೆ ಇಲ್ಲ.

ಸದ್ಯ ವಾಣಿ ಕಪೂರ್ ಧರಿಸಿರುವ ಮೇಲುಡುಗೆ ವಿವಾದಕ್ಕೆ ಕಾರಣವಾಗಿದೆ. ವಾಣಿ ತೊಟ್ಟಿರುವ ಟಾಪ್ ಮೇಲೆ ‘ಹರೇ ರಾಮ ಹರೇ ಕೃಷ್ಣ’ ಎಂಬ ಪದಗಳಿವೆ. ಈ ರೀತಿಯ ಡ್ರೆಸ್ ತೊಡುವುದು ಎಷ್ಟು ಸರಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಕಿನಿ ಮೇಲೆ ಹರೇ ರಾಮ್, ಹರೇ ಕೃಷ್ಣ ಪದಗಳ ಮುದ್ರಣ ಮಾಡಿರುವುದು ತಪ್ಪು, ಅದನ್ನು ಧರಿಸಿರುವುದೂ ತಪ್ಪಾಗಿದ್ದು, ಇದರಿಂದಾಗಿ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಲಿದೆ, ಈ ರೀತಿ ಭಾವನೆಗಳಿಗೆ ನೋವುಂಟು ಮಾಡಿದ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿತ್ರರಂಗದಿಂದ ವಾಣಿ ಕಪೂರ ಅವರನ್ನು ಬಹಿಷ್ಕರಿಸಬೇಕು. ಇಲ್ಲವೇ ನಟಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆಯೇ ವಾಣಿ ಕಪೂರ್ ಅಭಿಮಾನಿಗಳು ತಮ್ಮ ನಟಿಯನ್ನು ಸಮರ್ಥಿಸಿಕೊಂಡಿದ್ದು, ವಾಣಿ ಕಪೂರ್ ಅವರ ಹೆಸರಿಗೆ ಕಳಂಕ ತರಲು ಫೇಕ್ ಫೋಟೋಗಳನ್ನು ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top