fbpx
ಸಮಾಚಾರ

ಸುಫಾರಿ ಕೊಟ್ಟು ಎಸ್ಕೇಪ್: ಅಯೋಗ್ಯ ಸಿನಿಮಾ ಸಹನಟಿ ವಿರುದ್ದ ದೂರು ದಾಖಲು!

ನೀನಾಸಂ ಸತೀಶ್ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿದ್ದ ಅಯೋಗ್ಯ ಸಿನಿಮಾದಲ್ಲಿ ಸಹ ನಟಿ ಪಾತ್ರವನ್ನು ಮಾಡಿದ್ದ ‘ದೃಶ್ಯ’ ಎಂಬ ನಟಿಯ ವಿರುದ್ಧ ದೂರು ದಾಖಲಾಗಿದೆ. ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.

 

 

ದೃಶ್ಯ ಎಂಬ ನಟಿ ಉದ್ಯಮಿ ರಾಜೇಶ್‌ ಬಳಿ ಹಣ ಪಡೆದಿದ್ದರು. ಇದನ್ನು ವಾಪಾಸು ಕೊಡುವಂತೆ ರಾಜೇಶ್​ ಕೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ನಂತರ ಹಣ ಕೇಳಿದ ರಾಜೇಶ್​ ಮುಗಿಸುವಂತೆ ದೃಶ್ಯ ಸುಪಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಬಲಮುರಿ ಸಮೀಪ ರಾಜೇಶ್‌ ಮೇಲೆ ನಾಲ್ವರಿಂದ ಹಲ್ಲೆಯಾಗಿತ್ತು. ಈ ವೇಳೆ ರಾಜೇಶ್​ ದೇಹವನ್ನು ರೇಜರ್​ನಿಂದ ಕೊರೆದು ಹಾಕಲಾಗಿತ್ತು. ಈ ವೇಳೆ ‘ದೃಶ್ಯ ಬಳಿ ಹಣ ಕೇಳ್ತೀಯಾ’ ಎಂದು ಹಲ್ಲೆ ನಡೆಸುವವರು ಕೂಗಾಡಿರುವುದಾಗಿ ರಾಜೇಶ್​ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ರಾಜೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನಟಿ ದೃಶ್ಯ ವಿರುದ್ಧ ಮೈಸೂರಿನ ಕೆಆರ್​ಎಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೃಶ್ಯ ಮತ್ತು ಆಕೆಯ ತಂದೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top