ಸ್ಯಾಂಡಲ್‍ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟೀಸರ್ ಮೂಲಕ ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. ಹೌದು, ಮಕ್ಕಳ ದಿನಾಚರಣೆಯಂದೇ ರಿಷಭ್ ಶೆಟ್ಟಿ ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. ಅದೂ ಸಹ ತಮ್ಮ ಸಿನಿಮಾಗಳ ಟೀಸರ್ ಮಾಡುವ ರೀತಿಯಲ್ಲೇ ಮಗನ ಹೆಸರನ್ನು ಟೀಸರ್ ಮೂಲಕ ವಿನೂತನವಾಗಿ ರಿವೀಲ್ ಮಾಡಿದ್ದಾರೆ.
ರಣ್‍ವಿತ್ ಶೆಟ್ಟಿ ಎಂದು ನಾಮಕರಣ:
ರಿಷಬ್ ತಮ್ಮ ಮಗನ ವಿಡಿಯೋ ಮಾಡುವ ಮೂಲಕ ಮನೆಯ ಹೀರೋನನ್ನು ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ ತಮ್ಮ ಮಗನಿಗೆ ರಣ್‍ವಿತ್ ಶೆಟ್ಟಿ ಎಂದು ನಾಮಕರಣ ಮಾಡಿದ್ದಾರೆ. ಮೊದಲಿಗೆ ರಿಷಬ್ ಶೆಟ್ಟಿ ಟೀಸರಿನಲ್ಲಿ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದು, ನಂತರ ಮಗನಿಗೆ ಬೇರೆ ಬೇರೆ ಗೆಟಪಿನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ನಮ್ಮನೆ ಮುದ್ದು ಮಗುವನ್ನ ನಿಮಗೆ ಪರಿಚಯ ಮಾಡಿಕೊಡ್ತಿದೀವಿ.
ಮರಿ ಡಿಟೆಕ್ಟೀವ್ ಕಡೆಯಿಂದ ಎಲ್ರಿಗೂ ಹ್ಯಾಪಿ ಮಕ್ಕಳ ದಿನಾಚರಣೆ..! 😎
Seeking your blessings & wishes we introduce our bundle of joy Ranvit Shettyhttps://t.co/UJlGKtid1p— Rishab Shetty (@shetty_rishab) November 14, 2019
ಫುಲ್ ಫಿಲ್ಮಿ ಸ್ಟೈಲ್ನಲ್ಲಿ ಮಾಡಿರುವ ಈ ಟೀಸರ್ನಲ್ಲಿ ಮಗುವಿನ ಮುದ್ದಾದ ಪೋಟೋ, ಮಗು ಡಾ.ರಾಜ್ ಅವರ ಫೋಟೋ ಜತೆ ಆಟವಾಡುತ್ತಿರುವುದು ಹಾಗೂ ರಿಷಭ್ ಡಿಟೆಕ್ಟೀವ್ ಪಾತ್ರದಲ್ಲಿ ಕಾಣಿಸಿಕೊಂಡ ‘ಬೆಲ್ ಬಾಟಮ್’ ಸಿನಿಮಾದ ಕೆಲ ದೃಶ್ಯಗಳಿವೆ. ರಿಷಭ್ ಶೆಟ್ಟಿ ತಮ್ಮ ಯೂ ಟ್ಯೂಬ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಏಪ್ರಿಲ್ 7ರಂದು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
