fbpx
ಸಮಾಚಾರ

ರಷ್ಯಾ ಅಭಿಮಾನಿಯಿಂದ ಬಂದ ವಿಶೇಷ ವಿಡಿಯೋ ಸಂದೇಶಕ್ಕೆ ಕಿಚ್ಚ ಸುದೀಪ್ ಫಿದಾ

ಅಭಿನಯ ಚಕ್ರವರ್ತಿ ಸುದೀಪ್​, ಕೇವಲ ಸ್ಯಾಂಡಲ್​ವುಡ್​ನ ನಟನಷ್ಟೇ ಅಲ್ಲ. ತನ್ನ ವಿಭಿನ್ನ ಮ್ಯಾನರಿಸಂನಿಂದ ದೇಶ, ಭಾಷೆಗೂ ಮೀರಿ ಬೆಳೆದು ನಿಂತಿರೋ ಕಲಾವಿದ. ಸುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಭಾರೀ ಅಭಿಮಾನಿಗಳು ಇದ್ದಾರೆ ಎನ್ನುವ ವಿಷಯ ಈಗಾಗಲೇ ಗೊತ್ತಿರುವ ವಿಷಯವೇ. ಕೆಲ ತಿಂಗಳ ಹಿಂದೆ ಜಪಾನ್ನ ಅಭಿಮಾನಿಯೊಬ್ಬಳು ಕಿಚ್ಚ ಸುದೀಪ್ ಅವರ ಬಗೆಗಿನ ಅಭಿಮಾನವನ್ನು ತೋರ್ಪಡಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿಬಿಟ್ಟಿದ್ದಳು. ಅಂತೆಯೇ ಪೋಲೆಂಡ್ ದೇಶದ ಅಭಿಮಾನಿಯೊಬ್ಬಳು ಕೂಡ ಕಿಚ್ಚನ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಳು ಇದೀಗ ರಷ್ಯಾ ದೇಶದಿಂದ ಕಿಚ್ಚನಿಗೆ ಅಭಿಮಾನಿಯಾಗಿದ್ದಾಳೆ.

 

 

ಸುದೀಪ್ ಸಿನಿಮಾಗಳು ಮತ್ತು ಬಿಗ್ ಬಾಸ್ ನಡೆಸಿಕೊಡುವ ರೀತಿ ನೋಡಿ ಫಿದಾ ಆಗಿರುವ ದೂರದ ರಷ್ಯಾ ಯುವತಿಯೊಬ್ಬರು ಕಿಚ್ಚನಿಗೆ ವಿಶೇಷ ಸಂದೇಶವೊಂದು ಕಳುಹಿಸಿದ್ದಾರೆ. ರಷ್ಯಾದ ಮರೀನಾ ಕಾರ್ಟಿಂಕಾ ಎನ್ನುವ ಯುವತಿ ಸುದೀಪ್ ದೊಡ್ಡ ಅಭಿಮಾನಿಯಿಂತೆ. ಮರೀನಾ ತನ್ನ ಅಭಿಮಾನವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

 

 

ವಿಡಿಯೋದಲ್ಲಿ ಏನಿದೆ?
ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು ಪ್ರಯತ್ನಿಸುತ್ತೇನೆ. ನೀವು ಅತ್ಯುತ್ತಮ ನಟರಾಗಿದ್ದು, ನಾನು ನಿಮ್ಮ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತೇನೆ. ನೀವು ನಟಿಸಿದ ಪುಲಿ, ಕೋಟಿಗೊಬ್ಬ, ಹೆಬ್ಬುಲಿ, ಪೈಲ್ವಾನ್ ಸಿನಿಮಾಗಳನ್ನು ನೋಡಿದ್ದೇನೆ. ನೀವು ಯಾವಾಗಲೂ ಸಂತೋಷವಾಗಿ ಹಾಗೂ ಆರೋಗ್ಯವಾಗಿ ಇರಬೇಕು ಎಂದು ಬಯಸುತ್ತೇನೆ. ನೀವು ನಮಗೆ ಮನರಂಜನೆ ನೀಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸುದೀಪ್​ ಅಭಿಮಾನಿಗಳ ಟ್ವಿಟರ್​ ಖಾತೆಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಅಭಿಮಾನಿ ಮರೀನಾ ಕಾರ್ಟಿಂಕಾಗೆ ಧನ್ಯವಾದ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top