fbpx
ಸಮಾಚಾರ

ಹಿಂದಿ ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್‍ಗೆ ವಿಶೇಷ ಉಡುಗೊರೆ ಕೊಟ್ಟ ಸುಧಾ ಮೂರ್ತಿ!

ಬಾಲಿವುಡ್ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುವ ಹಿಂದಿ ಅವತರಣಿಕೆಯ ಕೌನ್ ಬನೇಗಾ ಕರೋಡ್​ಪತಿ(ಕೆಬಿಸಿ)ಯಲ್ಲಿ ಈ ಬಾರಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಭಾಗಿಯಾಗಿದ್ದು, ಬಿಗ್ ಬಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಇದೆ ವೇಳೆ ಸುಧಾಮೂರ್ತಿ, ತಮ್ಮ ಪ್ರತಿಷ್ಠಾನದ ಮೂಲದ ಹೊಸ ಬದುಕು ಕಟ್ಟಿಕೊಂಡಿರುವ ದೇವದಾಸಿಯರು ತಯಾರಿಸಿದ ಕೌದಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಈ ವಿಷಯವನ್ನು ಅಮಿತಾಭ್‌ ಅವರೇ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. “ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸುಧಾಮೂರ್ತಿ ಅವರು ದೇವದಾಸಿಯರಿಗೆ ಹೊಸ ಬದುಕು ಕೊಟ್ಟಿದ್ದಾರೆ. ದೇವದಾಸಿಯರು ತಯಾರಿಸಿರುವ ಈ ಕೌದಿ ಸದಾ ನೆನಪಿನಲ್ಲಿ ಉಳಿಯುವ ಕಾಣಿಕೆಯಾಗಿದೆ” ಎಂದು ಅಮಿತಾಭ್‌ ಬರೆದುಕೊಂಡಿದ್ದಾರೆ.

‘ನಾನು ಸಿನಿಮಾಪ್ರೇಮಿ, ಅಮಿತಾಭ್ ಬಚ್ಚನ್ ಅವರಂಥ ಶ್ರೇಷ್ಠ ನಟರನ್ನು ಭೇಟಿಯಾಗಿದ್ದು ತುಂಬ ಸಂತೋಷ ನೀಡಿದೆ. ಸೋಲು-ಗೆಲುವು ದೊಡ್ಡ ವಿಷಯವಲ್ಲ, ನಾವು ಮಾಡುವ ಕೆಲಸದ ಕುರಿತು ಜನರನ್ನು ತಲುಪುವುದೇ ನಮ್ಮ ಧ್ಯೇಯ’ ಎಂದಿರುವ ಸುಧಾಮೂರ್ತಿ, ಇನ್ಪೊಸಿಸ್ ಪ್ರತಿಷ್ಠಾನದ ಕೆಲಸಗಳ ಬಗ್ಗೆ ಬಿಗ್ ಬಿ ಬಳಿ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top