fbpx
ಸಮಾಚಾರ

“ಸರ್ದಾರ್ ಪಟೇಲ್ ಪ್ರತಿಮೆಗಿಂತಲೂ ಎತ್ತರವಾಗಿ ಯಡಿಯೂರಪ್ಪ ಪ್ರತಿಮೆ ನಿರ್ಮಾಣ” ತುಮಕೂರು ಸಂಸದ.

ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಅವರ ಪ್ರತಿಮೆಯನ್ನು ಸರ್ದಾರ್​ ವಲ್ಲಭಬಾಯಿ ಪಟೇಲ್ ಪ್ರತಿಮೆಗಿಂತಲೂ ಎತ್ತರವಾಗಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.

ತುಮಕೂರು ನಗರದಲ್ಲಿ ನಡೆಯುತ್ತಿರುವ 66ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಸಂಸದ ಜಿ.ಎಸ್ ಬಸವರಾಜ್, “ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕುಮಾರಧಾರ ಮತ್ತು ನೇತ್ರಾವತಿ ನದಿಯಿಂದ ಎತ್ತಿನಹೊಳೆ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿಸಬೇಕು. ಈ ಕೆಲಸವಾದರೆ ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗಿಂತಲೂ ಎತ್ತರವಾದ ಪ್ರತಿಮೆಯು ರಾಜ್ಯದಲ್ಲಿ ನಿರ್ಮಾಣವಾಗಲಿದೆ” ಎಂದು ಹೇಳಿದರು.

ಸರ್ಕಾರ ನೇತ್ರಾವತಿ ಕುಮಾರಧಾರ ಸಂಗಮವಾಗುವ ಜಾಗದಲ್ಲಿ ಅಣೆಕಟ್ಟು ಕಟ್ಟಿ 200 ಟಿಎಂಸಿ ನೀರು ತರುವ ಮೆಗಾ ಪ್ಲಾನ್ ಮಾಡುತ್ತಿದ್ದೇವೆ. ಅದೇ ರೀತಿ ಉತ್ತರ ಕರ್ನಾಟಕಕ್ಕೂ ಅಘನಾಶಿನಿ, ಬೇಡ್ತಿ ನದಿಗಳ 130 ಟಿಎಂಸಿ ನೀರು ಕೊಡುವ ಪ್ರಯತ್ನ ಮಾಡುತ್ತೇವೆ. 36 ಸಾವಿರ ಕೆರೆಗಳು ತುಂಬಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇವುಗಳೆಲ್ಲವನ್ನು ಮಾಡಿದರೆ ರೈತ ಇನ್ನು ಐವತ್ತು ವರ್ಷಗಳ ಕಾಲ ಬದುಕುತ್ತಾನೆ. ಎತ್ತಿನಹೊಳೆ ಯೋಜನೆಗೆ ಕುಮಾರಧಾರ ನದಿಯ 6.5 ಟಿಎಂಸಿ ನೀರು ಕೊಡಿಸುವ ಪ್ರಯತ್ನ ಮಾಡಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಯಶಸ್ವಿ ಮಾಡಬೇಕು ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top