fbpx
ಸಮಾಚಾರ

ಆರ್‌ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ: ಬರೋಬ್ಬರಿ 12 ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB!

ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2020ರ ಆವೃತ್ತಿಯಲ್ಲಿ ಶತಾಯಗತಾಯ ಟ್ರೋಫಿ ಗೆಲ್ಲಲು ಬೆಂಗಳೂರು ಫ್ರಾಂಚೈಸಿ ಪಣತೊಟ್ಟಿದ್ದು, ತಂಡಕ್ಕೆ ಮೇಜರ್ ಸರ್ಜರಿ ಮಾಡಿದೆ. ಹರಾಜು ಪಕ್ರಿಯೆಗೂ ಮೊದಲೇ ತಂಡದಲ್ಲಿದ್ದ ಬರೋಬ್ಬರಿ 12 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರು
ಮಾರ್ಕಸ್‌ ಸ್ಟೋಯ್ನಿಸ್‌, ಶಿಮ್ರಾನ್‌ ಹೆಟ್ಮಾಯೆರ್‌, ಆಕಾಶ್‌ದೀಪ್‌ ನಾಥ್‌, ನೇಥನ್‌ ಕೌಲ್ಟರ್‌ ನೈಲ್‌, ಡೇಲ್‌ ಸ್ಟೇನ್‌, ಕಾಲಿನ್‌ ಡಿ’ಗ್ರ್ಯಾಂಡ್‌ಹೋಮ್‌, ಪ್ರಯಾಸ್‌ ರೇ ಬರ್ಮನ್‌, ಟಿಮ್‌ ಸೌಥೀ, ಕುಲ್ವಂತ್‌ ಖೇಜ್ರೊಲಿಯ, ಹಿಮ್ಮತ್‌ ಸಿಂಗ್‌, ಹೆನ್ರಿಚ್‌ ಕ್ಲಾಸನ್‌, ಮಿಲಿಂದ್‌ ಕುಮಾರ್‌.

ಡಿಸೆಂಬರ್ 19ರಂದು ಕೋಲ್ಕತದಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಆ ವೇಳೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಲಿದೆ. ಅಲ್ಲದೇ RTM ಕಾರ್ಡ್ ಬಳಸಿ ತಮಗೆ ಬೇಕಾದ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು
ವಿರಾಟ್‌ಕೊಹ್ಲಿ, ಮೊಯೀನ್‌ ಅಲಿ, ಯುಜ್ವೇಂದ್ರ ಚಹಲ್‌, ಎಬಿ ಡಿ’ವಿಲಿಯರ್ಸ್‌, ಮೊಹಮ್ಮದ್‌ ಸಿರಾಜ್‌, ನವದೀಪ್‌ ಸೈನಿ, ದೇವದತ್‌ ಪಡಿಕ್ಕಲ್‌, ಪಾರ್ಥಿವ್‌ ಪಟೇಲ್‌, ಪವನ್‌ ನೇಗಿ, ಉಮೇಶ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಗುರುಕೀರತ್‌ ಸಿಂಗ್‌ ಮಾನ್‌, ಶಿವಂ ದುಬೇ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top