fbpx
ಸಮಾಚಾರ

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಆ ದಿನಗಳು’ ಖ್ಯಾತಿಯ ನಟಿ!

ಆ ದಿನಗಳು ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದ ವೇದಾ ಮೂರ್ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದರು. ತೆಲುಗು ಬಿಗ್​ಬಾಸ್​ನ ಮೊದಲ ಸೀಸನ್​ನಲ್ಲಿ ಸ್ಪರ್ಧಿಯೂ ಆಗಿದ್ದ ಅರ್ಚನಾ ಶಾಸ್ತ್ರಿ ಇದೀಗ ಸದ್ದಿಲ್ಲದೆ ಮದುವೆ ಮಾಡಿಕೊಂಡು ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಜಗದೀಶ್ ಜೊತೆಗೆ ಅರ್ಚನಾ ಮದುವೆ ಆಗಿದ್ದಾರೆ.

ಅರ್ಚನಾ ವೇದಾ ತಮ್ಮ ಗೆಳೆಯ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದಿನಲ್ಲಿ ಗುರು-ಹಿರಿಯರ ನಿಶ್ಚಯಿಸಿದ್ದ ಮೂಹೂರ್ತದಲ್ಲಿ ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ನಡೆದಿದೆ. ಅರ್ಚಾನಾ ಮತ್ತು ಜಗದೀಶ್ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಟಾಲಿವುಡ್‍ ನ ಅನೇಕ ನಟ, ನಟಿಯರು, ನಿರ್ದೇಶಕರು ಬಂದು ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ.

ಅರ್ಚನಾ ಅವರು ಜಗದೀಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಇವರು ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು. ನಂತರ ಎರಡೂ ಕುಟುಂಬವು ಒಪ್ಪಿ ಅರ್ಚನಾ ಮತ್ತು ಜಗದೀಶ್ ಮದುವೆ ಮಾಡಿದ್ದಾರೆ.

ನಟಿ ಅರ್ಚನಾ ಕನ್ನಡದಲ್ಲಿ ‘ಮೈತ್ರಿ’ ‘ಮಿಂಚು’ ಮತ್ತು ‘ಮೇಘ ವರ್ಷಿಣಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ ತೆಲುಗಿನ ಬಿಗ್ ಬಾಸ್ ಸೀಸನ್ ಒಂದರಲ್ಲೂ ಅರ್ಚನಾ ಪಾಲ್ಗೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top