fbpx
ಸಮಾಚಾರ

ಸುದೀಪ್, ಪುನೀತ್‍ಗೆ ಸವಾಲು ಹಾಕಿದ ಅನಿಲ್ ಕುಂಬ್ಳೆ: ಏನದು?

ಸ್ಯಾಂಡಲ್‌ವುಡ್‌ನಲ್ಲಿ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅದರಲ್ಲೂ ಕನ್ನಡ ಸೆಲೆಬ್ರಿಟಿಗಳು ಕನ್ನಡ ಕವನ ಓದುವ ಮೂಲಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಕವನ ಓದುವ ಸವಾಲು (#poetryreadingchallenge) ಅತ್ಯಂತ ಜನಪ್ರಿಯವಾಗುತ್ತಿದೆ. ಪ್ರಮುಖವಾಗಿಯೂ ಕನ್ನಡ ಸೆಲೆಬ್ರಿಟಿಗಳು ಹೃದಯ ಪೂರ್ವಕವಾಗಿ ಸ್ಪಂದಿಸಿರುವುದು ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಕಾರಣವಾಗಿದೆ.

ಕುಂಬ್ಲೆಗೆ ಚಾಲೆಂಜ್ ಹಾಕಿದ್ದ ಗೋಲ್ಡನ್ ಸ್ಟಾರ್:
ಕವನ ಓದುವ ಸವಾಲು ಇದೀಗ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಹತ್ತಿರ ಬಂದಿದ್ದು, ನಟ ಗಣೇಶ್, ಅನಿಲ್ ಕುಂಬ್ಳೆಗೆ ಈ ಸವಾಲು ಹಾಕಿದ್ರು. ಇದನ್ನು ಯಶಸ್ವಿಯಾಗಿ ಪೂರೈಸಿದ ಅನಿಲ್ ಕುಂಬ್ಳೆ, ಸುದೀಪ್, ಪುನೀತ್​ ವಿಜಯ್​ ಪ್ರಕಾಶ್​ ರಿಗೆ ಚಾಲೆಂಜ್​ ನೀಡಿದ್ದಾರೆ.

ಅನಿಲ್ ಕುಂಬ್ಳೆ, ರಾಷ್ಟ್ರಕವಿ ಕುವೆಂಪುರವರ ಕವನ ಓದಿದ್ದಾರೆ. ”ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ” ಎಂದು ಹಾಡಿದ್ದಾರೆ. ಈ ಮೂಲಕ ತಮ್ಮ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಟದ ತಮ್ಮ ಸಾಧನೆಯಿಂದ ಕರುನಾಡಿಗೆ ಹೆಮ್ಮೆ ತಂದಿರುವ ಕುಂಬ್ಳೆ ಇದೀಗ ಕವನ ಓದಿದ್ದಾರೆ.

ಅನಿಲ್ ಕುಂಬ್ಳೆ ಅವರು ಟ್ವಿಟ್ಟರಿನಲ್ಲಿ ಈ ವಿಡಿಯೋ ಶೇರ್ ಮಾಡಿ, “ಈ ಸವಾಲನ್ನು ಮುಂದುವರಿಸಬೇಕು ಎಂದು ನನ್ನ ಸ್ನೇಹಿತರಾದ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ವಿಜಯ ಪ್ರಕಾಶ್ ಅವರಿಗೆ ಕೇಳಿಕೊಳ್ಳುತ್ತೇನೆ. ಅದರಲ್ಲೂ ವಿಜಯ ಪ್ರಕಾಶ್ ಹಾಡಿನ ಮೂಲಕವೇ ಈ ಚಾಲೆಂಜ್ ಪೂರ್ಣಗೊಳಿಸಬೇಕು” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top