fbpx
ಸಮಾಚಾರ

ಆಧುನಿಕ ತಂತ್ರಜ್ಞಾನದೊಂದಿಗೆ ‘ದಾರಿ ತಪ್ಪಿದ ಮಗ’ ರೀ ರಿಲೀಸ್!

ನಾಲ್ಕೂವರೆ ದಶಕಗಳ ಹಿಂದಿನ ಕಾಲಘಟ್ಟದ ಚಿತ್ರಗಳನ್ನು ಆಧುನಿಕ ತಂತ್ರಜ್ಞಾನದಲ್ಲಿ ನೋಡಬಯಸುವ ಪ್ರೇಕ್ಷಕರಿಗಾಗಿ ೧೯೭೫ರಲ್ಲಿ ತೆರೆಕಂಡ ‘ದಾರಿ ತಪ್ಪಿದ ಮಗ’ ಮತ್ತೆ ಹೊಸ ಅವತಾರದಲ್ಲಿ ಬರಲಿದೆ. ಈಗ ಡಾ.ರಾಜ್‍ಕುಮಾರ್ ಅವರು ಪ್ರೊಫ್ರೆಸರ್ ಹಾಗೂ ಕಳ್ಳನಾಗಿ ದ್ವಿಪಾತ್ರದಲ್ಲಿ ನಟಿಸಿದ್ದ ದಾರಿ ತಪ್ಪಿದ ಮಗ ಚಿತ್ರಕ್ಕೆ 7.1 ಸೌಂಡ್ ಮಿಕ್ಸಿಂಗ್, 2ಕೆ ಡಿಟಿಎಸ್ ಅಳವಡಿಸಿದ್ದು ಈ ಚಿತ್ರವು ತೆರೆಗೆ ಬರಲು ಅಣಿಯಾಗಿದೆ.

ಇದೇ ನವೆಂಬರ್ 22ರಂದು ದಾರಿತಪ್ಪಿದ ಮಗ ಮತ್ತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಡಾ.ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಎಂ.ಮುನಿರಾಜು ಅವರು ದಾರಿ ತಪ್ಪಿದ ಮಗ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹೊರಟಿದ್ದಾರೆ.

ಅಂದು ಪೇಕೇಟಿ ಶಿವರಾಂ ನಿರ್ಮಿಸಿ ನಿರ್ದೇಶಿಸಿದ್ದ ಬಹುತಾರಾಗಣದ ಚಿತ್ರದಲ್ಲಿ ಡಾ ರಾಜ್‌ಕುಮಾರ್, ಜಯಮಾಲಾ, ಆರತಿ, ಕಲ್ಪನಾ, ಮಂಜುಳ ನಾಯಕ, ನಾಯಕಿಯರಾಗಿದ್ದರೆ, ಪೋಷಕ ಪಾತ್ರದಲ್ಲಿ ಎಂ ವಿ ರಾಜಮ್ಮ, ವಜ್ರಮುನಿ, ಕೆ ಎಸ್ ಅಶ್ವತ್ಥ್ ಮೊದಲಾದವರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top