fbpx
ಸಮಾಚಾರ

“ಜಗ್ಗೇಶ್​​ಗೂ, ಯಶವಂತಪುರ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ” ಶೋಭಾ ಕರಂದ್ಲಾಜೆ

“ಜಗ್ಗೇಶ್ ಅವರಿಗೂ ಮತ್ತು ಯಶವಂತಪುರ ಕ್ಷೇತ್ರಕ್ಕೂ ಸಂಬಂಧವಿಲ್ಲ. ಅವರಿಗೆ ಒಂದು ಸ್ವಂತ ಕ್ಷೇತ್ರವೂ ಇಲ್ಲ. ಸೂಕ್ತ ಅಭ್ಯರ್ಥಿ ಸಿಗದ ಕಾರಣ ಕೊನೇ ಗಳಿಗೆಯಲ್ಲಿ ಜಗ್ಗೇಶ್ ಅವರಿಗೆ ಯಶವಂತಪುರ ಕ್ಷೇತ್ರದ ಟಿಕೆಟ್ ನೀಡಿತ್ತು. ಆದರೂ ಅವರು ಕ್ಷೇತ್ರದಲ್ಲಿ ಹೆಚ್ಚು ಓಡಾಡಲಿಲ್ಲ” ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಪಕ್ಷದ ತೀರ್ಮಾನದಿಂದ ಸೋಮಶೇಖರ್ ಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಅವರನ್ನು ಗೆಲ್ಲಿಸುವ ಕುರಿತಂತೆ ಸದ್ಯದಲ್ಲಿಯೇ ಕಾರ್ಯಕರ್ತರ ಸಭೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಅನೇಕರು ಜಗ್ಗೇಶ್ ಅವರ ಕ್ಷೇತ್ರ ಯಶವಂತಪುರ ಎಂದು ಹೇಳುತ್ತಿದ್ದಾರೆ. ಆದರೆ ಅಸಲಿಗೆ ಯಶವಂತಪುರ ಅವರ ಕ್ಷೇತ್ರವೇ ಅಲ್ಲ. ಯಶವಂತಪುರ ಕ್ಷೇತ್ರದಲ್ಲಿ ಎರಡು ಭಾರಿ ಸೋಮಶೇಖರ್ ಗೆಲುವು ಸಾಧಿಸಿದ್ದರು. ಇಂತಹವರಿಗೆ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಅವರನ್ನು ಗೆಲ್ಲಿಸುವ ಸಂಬಂಧ ಸಮಾವೇಶವನ್ನು ನಡೆಸಲಾಗುತ್ತಿದೆ. ಎಂದು ಹೇಳುವ ಮೂಲಕ ಜಗ್ಗೇಶ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಅಂದಹಾಗೆ ಯಶವಂತಪುರದಲ್ಲಿ ಈಗ ಬಿಜೆಪಿಯಲ್ಲಿ ಈಗ ಬಂಡಾಯದ ಬಿಸಿ ಶುರುವಾಗಿದೆ. ಅನರ್ಹ ಶಾಸಕರಿಗೆ ಪಕ್ಷ ಟಿಕೆಟ್​ ಘೋಷಿಸಿದ ಹಿನ್ನೆಲೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಜಗ್ಗೇಶ್​ ಮುನಿಸು ತೋರಿದ್ದು, ಸಭೆಯಿಂದ ದೂರ ಉಳಿಯುವ ಪ್ರಯತ್ನ ನಡೆಸಿದ್ದಾರೆ. ಸಕ್ರಿಯ ರಾಜಕಾರಣಿಯಾಗಬೇಕು ಎಂದುಕೊಂಡಿದ್ದ ಜಗ್ಗೇಶ್​ ಉಪಚುನಾವಣಾ ಕಣಕ್ಕೆ ಇಳಿಯಲು ಉತ್ಸಾಹ ತೋರಿದ್ದರು. ಈಗ ಅನರ್ಹ ಶಾಸಕರಿಗೆ ಪಕ್ಷ ಮಣೆಹಾಕಿರುವುದರಿಂದ ಸಿಟ್ಟಾದ ಜಗ್ಗೇಶ್​ ಸಭೆಯಿಂದ ದೂರ ಉಳಿಯುತ್ತಾ, ಬಂಡಾಯದ ಪಾತಕೆ ಹಾರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top