fbpx
ಸಮಾಚಾರ

ನವೆಂಬರ್ 17: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, ನವೆಂಬರ್ 17 2019
ಸೂರ್ಯೋದಯ : 6:18 am
ಸೂರ್ಯಾಸ್ತ: 5:50 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಕಾರ್ತೀಕ
ಪಕ್ಷ :ಕೃಷ್ಣಪಕ್ಷ
ತಿಥಿ : ಪಂಚಮೀ 18:22
ನಕ್ಷತ್ರ: ಪುನರ್ವಸು 22:59
ಯೋಗ: ಶುಭ 26:57
ಕರಣ: ಕುಲವ 06:51 ತೈತುಲ 18:22

ಅಭಿಜಿತ್ ಮುಹುರ್ತ: 11:41 am – 12:27 pm
ಅಮೃತಕಾಲ : 8:37 pm – 10:12 pm

ರಾಹುಕಾಲ- 4:20 pm – 5:46 pm
ಯಮಗಂಡ ಕಾಲ- 12:04 pm – 1:29 pm
ಗುಳಿಕ ಕಾಲ- 2:55 pm – 4:20 pm

ಎಲ್ಲಾ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ. ಎಲ್ಲಾ ಕಾರ್ಯಗಳು ದೀರ್ಘ ಸಮಯವನ್ನು ತೆಗೆದುಕೊಳ್ಳುವವು. ಕೆಲಸದಲ್ಲಿ ಚುರುಕುತನ ಕಾಣಲು ಆಂಜನೇಯ ಸ್ತೋತ್ರ ಪಠಿಸಿ.

ವಿರೋಧಿಗಳು ನಿಮ್ಮನ್ನು ಸೋಲಿಸಲು ಪಣ ತೊಟ್ಟಿರುವಂತಿದೆ. ಆದರೆ ನೀವು ಅಂಜುವ ಅಗತ್ಯವಿಲ್ಲ. ವಿರೋಧಿಗಳು ಎಸೆಯುವ ಪ್ರತಿಯೊಂದು ಅಸ್ತ್ರಕ್ಕೂ ನಿಮ್ಮ ಬಳಿ ಪ್ರತಿ ಅಸ್ತ್ರ ಇದೆ. ಅದನ್ನು ಸಕಾಲದಲ್ಲಿ ಉಪಯೋಗಿಸಿ ಯಶಸ್ಸು ಹೊಂದುವಿರಿ.

ಹತ್ತಿರದ ಬಂಧುಗಳೇ ಕಿರಿಕಿರಿ ಮಾಡುವ ಸಾಧ್ಯತೆ ಇದೆ. ಹಾಗಂತ ಎಲ್ಲಾ ಬಂಧುಗಳನ್ನು ದೂಷಿಸುವುದು ಸರಿಯಲ್ಲ. ನೀವು ಸಾಗುತ್ತಿರುವ ದಾರಿ ಉತ್ತಮವಾಗಿದ್ದು ಇದು ಕೆಲವರಿಗೆ ಅಸೂಯೆಯನ್ನುಂಟು ಮಾಡುವುದು. ಆದರೆ ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳದಿರುವುದು ಒಳ್ಳೆಯದು.

ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ನಡೆಯಬೇಕೆಂಬ ಹಠ. ಒಮ್ಮೆ ಸೋಲು ಒಮ್ಮೆ ಗೆಲುವು ಇದು ಜೀವನದ ಆಟ. ಹಾಗಾಗಿ ಸೋತು ಗೆಲ್ಲುವುದು ಜಾಣರ ಲಕ್ಷ ಣ. ನಾರಸಿಂಹ ದೇವರನ್ನು ಅನನ್ಯ ಭಕ್ತಿಯಿಂದ ನೆನೆಯಿರಿ. ಬಂದ ಸಂಕಷ್ಟಗಳು ದೂರವಾಗುವವು.

 

ನಿಮ್ಮ ಸಲಹೆ ಸೂಚನೆಗಳನ್ನು ತಿಳಿಯುವ ಸಲುವಾಗಿ ಜನರು ನಿಮ್ಮ ಬಳಿಗೆ ಬರುವರು. ನಿಮ್ಮ ಬಾಲ್ಯದ ಸ್ನೇಹಿತ ನಿಮಗೆ ಎದುರಾಗುವುದರಿಂದ ಸಂಭ್ರಮ ಪಡುವಿರಿ. ಆತನ ಕೆಲವು ವಿಚಾರಗಳು ನಿಮ್ಮನ್ನು ಮಂತ್ರಮುಗ್ಧನನ್ನಾಗಿಸುವವು.

 

ನಿಮ್ಮನ್ನು ನೀವೇ ಸ್ವಯಂ ಸಂಪೂರ್ಣ ವ್ಯಕ್ತಿಯೆಂದು ಭ್ರಮಿಸಿಕೊಂಡಿದ್ದಲ್ಲಿ ಅನರ್ಥಗಳು ಆಗುವವು. ಆದ್ದರಿಂದ ಎಲ್ಲವನ್ನೂ ನಿಯಂತ್ರಿಸುವ ಸ್ವತಂತ್ರ ವ್ಯಕ್ತಿಯಾದ ಭಗವಂತನ ಮೊರೆ ಹೋಗುವುದರಿಂದ ಒಳಿತಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ.

 

 

ನಂಬಿದ ಸ್ನೇಹಿತರೇ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಶಕ್ತಿ ನಿಮ್ಮದಾಗಿರುವುದರಿಂದ ಹೆಚ್ಚಿನ ತೊಂದರೆ ಇಲ್ಲ.

 

 

ಬಹಳ ದಿನಗಳಿಂದ ದೊಡ್ಡ ಸ್ವರೂಪದಲ್ಲಿ ತಲೆ ತಿನ್ನುತ್ತಿದ್ದ ವಿಚಾರವೊಂದು ಮಂಜುಗಡ್ಡೆಯಂತೆ ಕರಗಿ ಹೋಗಲಿದೆ. ಇದರಿಂದ ಮಾನಸಿಕ ಸದೃಢತೆ ಉಂಟಾಗುವುದು.

 

ಮಾನಸಿಕ ದೃಢತೆ ಸಂಪಾದಿಸಿಕೊಳ್ಳಿ. ಲಾಭ ತರುವಂತಹ ಹೊಸದಾದ ಕಾರ್ಯಕ್ಷ ಮತೆಗೆ ಸಿದ್ಧಿ ದೊರೆಯುವುದು. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆ ನಡೆಯುವವು. ಸಹೋದರನಿಂದ ಉತ್ತಮ ಮಾಹಿತಿ ದೊರೆಯುವುದು.

ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ತುಸುವಾದರೂ ಬಿಗಿ ಮನೋಭಾವ ತೋರುವುದು ಒಳ್ಳೆಯದು. ತೀರ ಒಳ್ಳೆಯತನ ಒಳ್ಳೆಯದಲ್ಲ. ಸ್ನೇಹಿತರು ನಿಮಗೆ ಸಹಾಯ ಹಸ್ತ ನೀಡುವರು.

 

ಅತಿಯಾದ ಲಾಭಾಂಶದ ಆಸೆಗೆ ಬಿದ್ದು ನಿಮ್ಮ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಡುತ್ತೇನೆ ಎಂದು ಭಾವಿಸಿ ಏಕಕಾಲಕ್ಕೆ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಇದರಿಂದ ಮಾನಸಿಕ ಕ್ಷೋಭೆ ಮತ್ತು ಹಣಕಾಸಿನ ತೊಂದರೆ ಎದುರಿಸಬೇಕಾಗುವುದು.

 

ತುಂಬಾ ಭಾವನಾತ್ಮಕವಾಗಿ ಬಂಧುಗಳೊಡನೆ ಸ್ಪಂದಿಸುವಿರಿ. ಆದರೆ ಹೊರ ಜಗತ್ತಿನಲ್ಲಿ ಅತಿಯಾದ ಭಾವನಾತ್ಮಕತೆ ತೊಂದರೆಯನ್ನುಂಟು ಮಾಡುವುದು. ಹಿರಿಯರ ಸಲಹೆಯಂತೆ ನಡೆದಲ್ಲಿ ನಿಮಗೆ ಅನ್ಯಾಯವಾಗುವುದು ತಪ್ಪುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top