fbpx
ಸಮಾಚಾರ

ಗಳಗಳನೆ ಕಣ್ಣೀರಿಟ್ಟ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು: ಏಕೆ? ವಿಡಿಯೋ ನೋಡಿ

ಕೆ.ಜಿ.ಎಫ್​ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರು ಕಣ್ಣೀರಿಡುತ್ತಾ ತಮ್ಮ ನೋವನ್ನು ಹಂಚಿಕೊಂಡಿರುವ ವಿಡಿಯೋ ಈಗ ಎಲ್ಲಡೆ ಹರಿದಾಡುತ್ತಿದೆ. ಯಶಸ್ವೀ ಸಂಗೀತ ನಿರ್ದೇಶಕ ಹೀಗೆ ಕಣ್ಣೀರಿಡುತ್ತಾ ವಿಡಿಯೋ ಮಾಡಲು ಒಂದು ಕಾರಣವಿದೆ.

 

 

ತಮ್ಮ ನಿರ್ದೇಶನದಲ್ಲಿ ಮೂಡಿಬಂದಿರುವ ಗಿರ್ಮಿಟ್​ ಚಿತ್ರವನ್ನು ಪ್ರೇಕ್ಷಕರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ” ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ. ಮಕ್ಕಳನ್ನು ಇಟ್ಟುಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಲು ಇಂತಹ ಹೊಸ ಪ್ರಯತ್ನ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದರೂ ಜನರು ಥಿಯೇಟರ್​​ಗಳತ್ತ ಬರುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಬೆಳಗ್ಗೆಯಿಂದ ಕಣ್ಣಿನಲ್ಲಿ ನೀರು ಬರುತ್ತಿದೆ. ಇದನ್ನು ಯಾವ ರೀತಿ ಸಮರ್ಥಿಸಿಕೊಳ್ಳಬೇಕೋ ಗೊತ್ತಿಲ್ಲ. ಒಳ್ಳೆಯದನ್ನು ಆಲೋಚನೆ ಮಾಡುವುದು ತಪ್ಪಾ ಎನಿಸುತ್ತದೆ. ನನ್ನ ರೀತಿಯೇ ನಾಲ್ಕು ಜನ ಮುಂದೆ ಬರಬೇಕು ಎನ್ನುವ ಕಾರಣಕ್ಕೆ ಪ್ರಯತ್ನ ಮಾಡುತ್ತಿದ್ದೆ, ಅದು ತಪ್ಪು ಅನಿಸುತ್ತಿದೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದರೆ ಅದು ಅವರ ತಪ್ಪಲ್ಲ. ಆದರೆ ಇಲ್ಲಿ ಯಾರದ್ದು ತಪ್ಪು ಎಂದು ತಿಳಿಯುತ್ತಿಲ್ಲ. ಒಳ್ಳೆಯದನ್ನು ಆಲೋಚನೆ ಮಾಡುವುದೇ ತಪ್ಪಾ ಎಂದು ಯೋಚಿಸುವಂತಾಗಿದೆ’ ಎಂದು ರವಿ ಕಣ್ಣೀರಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top