fbpx
ಸಮಾಚಾರ

ಮತ್ತೆ ಬಂದ್ರು ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ! ಈ ಬಗ್ಗೆ ಮುದ್ದಿನ ರಾಣಿ ಹೇಳಿದ್ದೇನು?

ಕನ್ನಡ ಹಿರಿಯ ನಟಿ ಮಹಾಲಕ್ಷ್ಮಿ ಹೆಸರಿಗೆ ತಕ್ಕಂತೆ ನೋಡಲು ಸಾಕ್ಷಾತ್ ಲಕ್ಷಿಯಂತೆಯೇ ಇದ್ದರು.1980-90 ರಲ್ಲಿ ನಂಬರ್ ಒನ್ ನಟಿಯಾಗಿದ್ದ ಇವರು ಅಂದಿನ ಕಾಲಘಟ್ಟದ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಮಹಾಲಕ್ಷ್ಮಿಯವರ ಯಶಸ್ಸು ಅಂದಿನ ಕಾಲದ ಸ್ಟಾರ್ ನಟರಿಗೂ ಪೈಪೋಟಿ ನೀಡುವಂತಿತ್ತು. ಆದರೆ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಇದ್ದಕ್ಕಿಂದಂತೆ ಹೇಳದೆ ಕೇಳದೆ ಮಾಯವಾಗಿದ್ದ ಮಹಾಲಕ್ಷ್ಮಿ ಈಗ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಿದ್ದಾರೆ.

ಕನ್ನಡ ರವಿ ಶ್ರೀವತ್ಸ ಅವರು ಮಹಾಲಕ್ಷ್ಮಿಯನ್ನು ಹುಡುಕಿ ಮತ್ತೆ ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಹು ವರ್ಷಗಳ ನಂತರ ಮಹಾಲಕ್ಷ್ಮಿ ಸಿನಿಮಾ ರಂಗಕ್ಕೆ ಮತ್ತೆ ಬರುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ರವಿ ಶ್ರೀವತ್ಸ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

“ಹುಡುಕುತ್ತಿದ್ದವರಿಗೆ ಸಿಕ್ಕ ಮಹಾಲಕ್ಷ್ಮಿ. ಬೆಳ್ಳಿತೆರೆಯನ್ನ ತುಂಬಿ ತುಳುಕಿಸುತಿದ್ದ ಅದ್ಭುತ ನಟಿ ‘ಮಹಾಲಷ್ಮಿ’ #Mahalakshmi ಧಿಡೀರನೆ ಒಂದು ದಿನ ಸಿನಿಮಾ ಜಗ್ಗತ್ತಿನಿಂದ ಕಣ್ಮರೆಯಾದಾಗಿನಿಂದ ಅವರ ಅಡ್ರೆಸ್ ಕೇಳಿ ಹುಡುಕಿ ಬಂದವರ ಸಂಖ್ಯೆ ಬಹಳ. ಕಳೆದುಹೋಗಿದ್ದ ನಮ್ಮ ‘ಚಿನ್ನದ ಮೂಗುತಿ’ ಈಗ ಸಿಕ್ಕಿದೆ. ಬೆಳ್ಳಿತೆರೆಯ ನಾಸಿಕಕ್ಕೇರಲು ಮತ್ತೆ ಸಜ್ಜಾಗಿದೆ. ನಿರ್ದೇಶಕ ಮಿತ್ರರೇ, ಅದ್ಭುತ ಕಲಾವಿದೆ ಸದುಪಯೋಗಿಸಿಕೊಳ್ಳಿ. ಇದೋ ಇವರೇ ನಮ್ಮ, ನಿಮ್ಮ ‘ಮಹಾಲಕ್ಷ್ಮಿ'” ಎಂದು ರವಿ ಶ್ರೀವತ್ಸ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ನಟಿ ಮಹಾಲಕ್ಷ್ಮಿ “ಕನ್ನಡಿಗರು ನನಗೆ ತೋರಿಸಿದ ಪ್ರೀತಿಯನ್ನು ನಾನು ಮರೆಯಲು ಸಾಧ್ಯವಿಲ್ಲ. ಕೌಟುಂಬಿಕ ಕಾರಣಗಳಿಂದಾಗಿ ನಾನು ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಈಗ ಮತ್ತೆ ವಾಪಸ್ ಆಗಲು ಮನಸ್ಸು ಮಾಡಿದ್ದೇನೆ. ಉತ್ತಮ ಪಾತ್ರಗಳು, ಡಿಗ್ನಿಫೈಡ್ ರೋಲ್‌ಗಳನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ ಮಹಾಲಕ್ಷ್ಮಿ.

ಇನ್ನು ತಮ್ಮ ಬಗ್ಗೆ ಕೇಳಿಬರುತ್ತಿದ್ದ ರೂಮರುಗಳ ಬಗ್ಗೆ ಮಾತನಾಡಿರುವ ಅವರು “ನಾನು ತುಂಬ ತುಂಬಾ ಚೆನ್ನಾಗಿ ಇದ್ದೀನಿ. ನನ್ನ ಬಗ್ಗೆ ಕೇಳಿ ಬರುತ್ತಿದ್ದ ಸುದ್ದಿಗಳೆಲ್ಲ ಶುದ್ಧ ಸುಳ್ಳು, ನನಗೆ ತುಂಬ ಒಳ್ಳೆಯ ಕುಟುಂಬ ಇದೆ. ನಾನು ಹೌಸ್ ವೈಫ್ ಆಗಿದ್ದೀನಿ,. ನಾನು ಸನ್ಯಾಸಿ ಅಲ್ಲ, ನಾನು ಸಂಸಾರಸ್ತೆ. ಚರ್ಚ್ ನಲ್ಲಿ ಕೆಲಸ ಮಾಡುತ್ತಿರುವುದು ನಿಜ ಆದರೆ ಸನ್ಯಾಸಿ ಅಲ್ಲ. ಸದ್ಯ ನಾನು ಚೆನ್ನೈನಲ್ಲಿ ನೆಲೆಸಿದ್ದೀನಿ.” ಎಂದು ಹೇಳಿದ್ದಾರೆ.

ಅಂದಹಾಗೆ ಮಹಾಲಕ್ಷ್ಮಿ ಚಿತ್ರರಂಗದಿಂದ ದೂರವಾದ ಮೇಲೆ ಅವರ ಬಗ್ಗೆ ಸಾಕಷ್ಟು ರೂಮರುಗಳು ಹರಿದಾಡುತ್ತಿದ್ದವು. “ಮಹಾಲಕ್ಷ್ಮಿ ಅವರದ್ದು ಭಗ್ನಪ್ರೇಮವಂತೆ. ಯಾರನ್ನೋ ಇಷ್ಟಪಟ್ಟು, ಪ್ರೀತಿಸಿ ಮೋಸ ಹೋದರಂತೆ. ಹೀಗಾಗಿಯೇ ಜೀವನದ ಬಗ್ಗೆ ಜಿಗುಪ್ಸೆ ಮೂಡಿ ಕ್ರೈಸ್ತ ಸನ್ಯಾಸಿನಿ ಆಗಿದ್ದಾರಂತೆ.” ಎಂಬ ವದಂತಿಗಳು ಹಬ್ಬಿದ್ದವು. ಆದರೆ ಮಹಾಲಕ್ಷ್ಮಿ ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ.

ಬಹು ಬೇಡಿಕೆಯಲ್ಲಿರುವಾಗಲೇ ಸಿನಿಮಾ ವೃತ್ತಿಯಿಂದ ಕಾರಣವನ್ನೂ ತಿಳಿಸದೆ ದೂರ ಆದರು. ನಂತರ ಅವರು ಎಲ್ಲಿದ್ದರು? ಏನ್ ಮಾಡುತ್ತಿದ್ದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಎಲ್ಲಾ ವದಂತಿ ರೂಮರುಗಳಿಗೂ ತೆರೆ ಎಳೆದಿರುವ ಮಹಾಲಕ್ಷ್ಮಿ ವಾಪಸ್ ಚಿತ್ರರಂಗಕ್ಕೆ ಬರುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top