fbpx
ಸಮಾಚಾರ

ದುರ್ವಿಧಿ… ಅರ್ಧಶತಕ ಬಾರಿಸಿದ ಬೆನ್ನಲ್ಲೆ ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ!

ಮೈದಾನದಲ್ಲಿ ಕ್ರಿಕೆಟ್ ಆಟಗಾರರು ಗಾಯಕ್ಕೆ ತುತ್ತಾಗುವುದು ಮಾಮೂಲಿ. ಹಲವಾರು ವರ್ಷಗಳಿಂದಲೂ ಇಂತಹ ಘಟನಗೆಗಳನ್ನು ನೋಡುತ್ತಲೇ ಬಂದಿದ್ದೇವೆ. ಅತಿ ಅಪರೂಪಕ್ಕೆ ಎಂಬಂತೆ ಕೆಲವರು ಮೈದಾನದಲ್ಲಿ ಪ್ರಾಣ ಬಿಟ್ಟಂತಹ ಘೋರ ಘಟನೆಗಳನ್ನೂ ಕೂಡ ಕ್ರಿಕೆಟ್ ಅಭಿಮಾನಿಗಳು ಕಂಡಿದ್ದಾರೆ. 2014ರಲ್ಲಿ ಸೀನ್ ಅಬೋಟ್ ಬೌನ್ಸರ್ ಆಸ್ಟ್ರೇಲಿಯಾ ಕ್ರಿಕೆಟಿಗ್ ಫಿಲ್ ಹ್ಯೂಸ್ ತಲೆಗೆ ಬಡಿದು ಮೃತಪಟ್ಟಿದ್ದರು. . ಇದೇ ಸಾಲಿಗೆ ಈಗ ಮತ್ತೊಂದು ಘಟನೆ ಸೇರಿದೆ.

 

 

41 ವರ್ಷ ವಯಸ್ಸಿನ ವೀರೇಂದ್ರ ನಾಯಕ್ ಎಂಬವರು ಹೈದರಾಬಾದ್​ ಕ್ಲಬ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಏಕದಿನ ಪಂದ್ಯದಲ್ಲಿ ವೀರೇಂದ್ರ ಅವರು ಹೈದರಾಬಾದ್​ನ ಮರಡ್​ಪಲ್ಲಿ ಸ್ಪೋರ್ಟಿಂಗ್ ಕ್ಷಬ್ ಪರ ಆಡುತ್ತಿದ್ದರು. ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಅವರು 50 ರನ್ ಪೂರೈಸಿದ ಬೆನ್ನಲ್ಲೇ ಸಾವನ್ನಪ್ಪಿದ್ದಾರೆ.

ಅರ್ಧ ಶತಕ ಹೊಡೆದ ನಂತರ ಅವರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಔಟ್ ಆಗಿದ್ದಾರೆ. ಔಟ್ ಆದ ಬಳಿಕ ವೀರೇಂದ್ರ ಅವರು ಪೆವಿಲಿಯನ್​ಗೆ ತೆರಳಿದ್ದಾರೆ. ಅಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸಾವಿಗೆ ಕಾರಣವೇನು?
ವಿರೇಂದ್ರ ನಾಯ್ಕ್ 66 ರನ್ ಬಾರಿಸಿದ್ದಾಗ ಅಂಪೈರ್ ನೀಡಿದ ತಪ್ಪು ನಿರ್ಧಾರಕ್ಕೆ ಪೆವಿಲಿಯನ್ ಸೇರಬೇಕಾಯಿತು. ಅಂಪೈರ್ ತೀರ್ಪಿಂದ ಬೇಸತ್ತು, ಪೆವಿಲಿಯನ್’ಗೆ ಬರುತ್ತಿದ್ದಂತೆ ಗೂಡೆಗೆ ತಲೆ ಚಚ್ಚಿಕೊಂಡು ಕುಸಿದು ಬಿದ್ದರು ಎಂದು ನಾಯಕ ತ್ರಿಪ್ಟ್ ಸಿಂಗ್ ತಿಳಿಸಿದ್ದಾರೆ. ಆ ಬಳಿಕ ವಿರೇಂದ್ರ ನಾಯ್ಕ್ ಅವರನ್ನು ಸಹಪಾಠಿಗಳು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿ ಹೋಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top