fbpx
ಸಮಾಚಾರ

‘ಗಂಡುಗಲಿ ಮದಕರಿ ನಾಯಕ’ ಚಿತ್ರದ ಅದ್ಧೂರಿ ಮುಹೂರ್ತಕ್ಕೆ ದಿನಾಂಕ ಫಿಕ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ಮುಹೂರ್ತಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಇದೇ ಡಿಸೆಂಬರ್ 02ರಂದು ಚಿತ್ರ ಸೆಟ್ಟೇರಲಿದೆ. ಅದ್ದೂರಿ ಮುಹೂರ್ತದ ಮೂಲಕ ಚಿತ್ರಕ್ಕೆ ಚಾಲನೆ ಸಿಗಲಿದೆ.

ಈಗಾಗಲೇ ಬೃಹತ್​ ಸೆಟ್ಟುಗಳ ನಿರ್ಮಾಣದ ಜೊತೆಗೆ ತಜ್ಞ ಕಲಾವಿದರ ನೀಲಿ ನಕ್ಷೆ ಸಿದ್ದಪಡಿಸಿದ್ದು ಚಿತ್ರದುರ್ಗ, ರಾಜಸ್ಥಾನ, ಮುಂಬೈ ಹಾಗೂ ಉತ್ತರ ಭಾರತದ ನಗರಗಳಲ್ಲಿ, ಚಿತ್ರದ ಶೂಟಿಂಗ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದು ಅಶೋಕ್ ಕಶ್ಯಪ್ ಅವರು ಕ್ಯಾಮರಾ ಹಿಡಿಯಲಿದ್ದಾರೆ.

‘ಗಂಡುಗಲಿ ಮದಕರಿ ನಾಯಕ’ ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಸಂಭಾಷಣೆ ಬರೆಯುತ್ತಿದ್ದಾರೆ ಬಿ ಎಲ್ ವೇಣು.. . ಇದೇ ಮೊದಲ ಬಾರಿಗೆ ದರ್ಶನ್, ರಾಜೇಂದ್ರಸಿಂಗ್ ಬಾಬು ಮತ್ತು ರಾಕ್ಲೈನ್ ವೆಂಕಟೇಶ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top