fbpx
ಸಮಾಚಾರ

ಮದ್ವೆಯಾಗಿ ಮೂರು ತಿಂಗಳ ಬಳಿಕ ಮಗಳನ್ನು ಪರಿಚಯಿಸಿದ ನಟಿ ರಾಖಿ ಸಾವಂತ್: ವಿಡಿಯೋ

ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ನಟಿ ಅನ್ನಿಸಿಕೊಳ್ಳೋದು ಹೇಗೆ? ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ರಾಖಿ ಸಾವಂತ್ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ! ಬೇರೇನೂ ಇಶ್ಯೂ ಇಲ್ಲದಿದ್ದರೆ ಯಾರ ಮೇಲಾದರೂ ಬಾಯಿಗೆ ಬಂದಂತೆ ಕೂಗಾಡಿಯಾದರೂ ಅಥವಾ ಬಟ್ಟೆ ಬಿಚ್ಚಿಯಾದರೂ ಆಗಾಗ ಸುದ್ದಿಯಾಗುತ್ತಾ ವಿವಾದವೆಬ್ಬಿಸೋದು ನಟಿ ರಾಖಿಯ ಹಳೇ ವರಸೆ. ಆದರೆ ಅದೇಕೋ ಒಂದಷ್ಟು ತಿಂಗಳುಗಳಿಂದ ಮರೆಯಾದಂತಿದ್ದ ರಾಖಿ ಇದೀಗ ಮತ್ತೊಮ್ಮೆ ಪ್ರತ್ಯಕ್ಷಳಾಗಿದ್ದಾಳೆ.

 

 

ರಾಖಿ ತನ್ನ ಇನ್‍ಸ್ಟಾದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬಾಲಕಿಯೊಬ್ಬಳು ರಾಖಿ ನನ್ನ ತಾಯಿ ಎಂದು ಹೇಳಿದ್ದಾಳೆ. ರಾಖಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಸ್ನೇಹಿತರೇ, ಅಭಿಮಾನಿಗಳೇ, ಇವಳು ನನ್ನ ಮಗಳು. ದಯವಿಟ್ಟು ಎಲ್ಲರೂ ಇವಳಿಗೆ ಆಶೀರ್ವಾದ ಮಾಡಿ” ಎಂದು ಬರೆದುಕೊಂಡಿದ್ದಾಳೆ.

ಅಷ್ಟಕ್ಕೂ ಇದು ಫನ್ನಿ ವಿಡಿಯೋ ಆಗಿದ್ದು ಈ ವಿಡಿಯೋನ ನೋಡಿ ನೆಟ್ಟಿಗರಂತೂ ರಾಖಿ ಸಾವಂತ್ ಗೆ ಛೀಮಾರಿ ಹಾಕುತ್ತಿದ್ದಾರೆ. ಯಾಕಂದ್ರೆ, ಮಗುವಿನ ಆ ವಿಡಿಯೋದಲ್ಲಿ ರಾಖಿ ಸಾವಂತ್ ಬೇಬಿ ಫಿಲ್ಟರ್ ಬಳಸಿದ್ದಾರೆ. ಬೇಬಿ ಫಿಲ್ಟರ್ ಬಳಸಿ ವಿಡಿಯೋ ಕ್ರಿಯೇಟ್ ಮಾಡಿ, ಇನ್ಸ್ಟಾಗ್ರಾಮ್ ನಲ್ಲಿ ಮಗಳು ಅಂತ ಹೇಳಿಕೊಂಡು ಫೂಲ್ ಮಾಡುತ್ತಿರುವ ರಾಖಿ ಸಾವಂತ್ ಗೆ ತಲೆಕೆಟ್ಟಿದೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

 

 

ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾಳೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top